ಜೆಕರ್ಯ 10:4

ಆತ ನಿಂದ ಮೂಲೆಗಲ್ಲೂ ಆತನಿಂದ ಮೊಳೆಯೂ ಆತನಿಂದ ಯುದ್ಧದ ಬಿಲ್ಲೂ ಆತನಿಂದ ಹಿಂಸಿಸುವವರೆಲ್ಲರೂ ಕೂಡಿಕೊಂಡು ಹೊರಡುತ್ತಾರೆ.

ಸಂದರ್ಭದೊಂದಿಗೆ ಓದಿ · ಜೆಕರ್ಯ 10

2ವಿಗ್ರಹಗಳು ವ್ಯರ್ಥವಾಗಿ ಮಾತ ನಾಡಿವೆ; ಶಕುನಗಾರರು ಸುಳ್ಳನ್ನು ನೋಡಿದ್ದಾರೆ; ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ; ವ್ಯರ್ಥವಾಗಿ ಆದರಿಸುತ್ತಾರೆ; ಆದದರಿಂದ ಮಂದೆಯ ಹಾಗೆ ತಮ್ಮ ದಾರಿಯಲ್ಲಿ ಹೋಗಿದ್ದಾರೆ; ಕುರುಬನಿಲ್ಲದ ಕಾರಣ ಕಳವಳಗೊಂಡಿದ್ದಾರೆ.

3ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯಿತು; ಮೇಕೆಗಳನ್ನು ದಂಡಿಸಿದೆನು; ಸೈನ್ಯಗಳ ಕರ್ತನು ತನ್ನ ಮಂದೆಯಾಗಿರುವ ಯೆಹೂದನ ಮನೆ ತನದವರನ್ನು ದರ್ಶಿಸಿ ಅವರನ್ನು ಯುದ್ಧದಲ್ಲಿ ತನ್ನ ಘನವಾದ ಕುದುರೆಯ ಹಾಗೆ ಮಾಡಿದ್ದಾನೆ.

4ಆತ ನಿಂದ ಮೂಲೆಗಲ್ಲೂ ಆತನಿಂದ ಮೊಳೆಯೂ ಆತನಿಂದ ಯುದ್ಧದ ಬಿಲ್ಲೂ ಆತನಿಂದ ಹಿಂಸಿಸುವವರೆಲ್ಲರೂ ಕೂಡಿಕೊಂಡು ಹೊರಡುತ್ತಾರೆ.

5ಅವರು ಯುದ್ಧ ದಲ್ಲಿ ಶತ್ರುವನ್ನು ಬೀದಿಗಳ ಕೆಸರಿನಲ್ಲಿ ತುಳಿಯುವ ಶೂರರ ಹಾಗಿರುವರು; ಕರ್ತನು ಅವರ ಸಂಗಡ ಇರುವದರಿಂದ ಯುದ್ಧಮಾಡುವರು; ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾಚಿಕೆಪಡಿಸುವರು.

6ಇದಲ್ಲದೆ ನಾನು ಯೆಹೂದನ ಮನೆತನದವರನ್ನು ಬಲಪಡಿಸುವೆನು, ಯೋಸೇಫನ ಮನೆತನದವರನ್ನು ರಕ್ಷಿಸುವೆನು; ಅವರನ್ನು ಕನಿಕರಿಸುವದರಿಂದ ತಿರಿಗಿ ತಂದು ನಿವಾಸಿಸ ಮಾಡುವೆನು; ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಅವರು ಇರುವರು; ನಾನೇ ಅವರ ದೇವರಾದ ಕರ್ತನಾಗಿದ್ದು ಅವರಿಗೆ ಉತ್ತರಕೊಡುವೆನು.

ಜೆಕರ್ಯ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी