ಯೆಶಾಯ 59:16

ಯಾವ ಮನುಷ್ಯನೂ ಇಲ್ಲದೆ ಇರುವದನ್ನು ಆತನು ನೋಡಿ, ಮಧ್ಯಸ್ಥಗಾರನು ಇಲ್ಲವೆಂದು ಆಶ್ಚರ್ಯಪಟ್ಟನು; ಆಗ ಆತನ ಬಾಹು ತನಗೋಸ್ಕರ ರಕ್ಷಣೆಯನ್ನೂ ನೀತಿಯನ್ನೂ ತಂದಿತು. ಅದೇ ಆತನನ್ನು ಉದ್ಧಾರಮಾಡಿತು.

ಸಂದರ್ಭದೊಂದಿಗೆ ಓದಿ · ಯೆಶಾಯ 59

14ನ್ಯಾಯವು ಸಹ ಹಿಂದಕ್ಕೆ ತಿರುಗಿ ಸಲ್ಪಟ್ಟಿದೆ. ನೀತಿಯು ದೂರದಲ್ಲಿ ನಿಲ್ಲುತ್ತದೆ; ಸತ್ಯವು ಬೀದಿಯಲ್ಲಿ ಬಿದ್ದುಹೋಯಿತು. ಯಥಾರ್ಥತೆಯು ಪ್ರವೇಶಿಸುವದೇ ಇಲ್ಲ.

15ಹೌದು, ಸತ್ಯವು ಇಲ್ಲದೇ ಹೋಯಿತು; ಕೆಟ್ಟದ್ದನ್ನು ಬಿಟ್ಟುಬಿಡುವವನು ಸುಲಿಗೆ ಯಾಗುತ್ತಾನೆ; ಕರ್ತನು ಅದನ್ನು ನೋಡಿದನು, ಅದ ರಲ್ಲಿ ನ್ಯಾಯವಿಲ್ಲದ್ದರಿಂದ ಆತನಿಗೆ ಮೆಚ್ಚಿಕೆಯಾಗಲಿಲ್ಲ.

16ಯಾವ ಮನುಷ್ಯನೂ ಇಲ್ಲದೆ ಇರುವದನ್ನು ಆತನು ನೋಡಿ, ಮಧ್ಯಸ್ಥಗಾರನು ಇಲ್ಲವೆಂದು ಆಶ್ಚರ್ಯಪಟ್ಟನು; ಆಗ ಆತನ ಬಾಹು ತನಗೋಸ್ಕರ ರಕ್ಷಣೆಯನ್ನೂ ನೀತಿಯನ್ನೂ ತಂದಿತು. ಅದೇ ಆತನನ್ನು ಉದ್ಧಾರಮಾಡಿತು.

17ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು; ಪ್ರತೀಕಾರದ ವಸ್ತ್ರ ಗಳನ್ನು ಹೊದಿಕೆಯಾಗಿ ಹೊದ್ದುಕೊಂಡು ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.

18ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು; ತನ್ನ ವೈರಿ ಗಳಿಗೆ ಕ್ರೋಧವನ್ನೂ ತನ್ನ ಶತ್ರುಗಳಿಗೂ ದ್ವೀಪಗ ಳಿಗೂ ಪ್ರತಿಫಲವನ್ನು ಸಲ್ಲಿಸುವನು.

ಯೆಶಾಯ 59 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी