ಹೀಗೆ ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು.
6ಅವರು ಫ್ರುಗ್ಯ ಗಲಾತ್ಯ ಪ್ರಾಂತ್ಯದ ಕಡೆಗೆಲ್ಲಾ ಹಾದು ಹೋಗುತ್ತಿರುವಾಗ ಆಸ್ಯದಲ್ಲಿ ವಾಕ್ಯವನ್ನು ಸಾರಬಾರದೆಂದು ಪವಿತ್ರಾತ್ಮನು ತಡೆದದ್ದರಿಂದ
7ಅವರು ಮುಸ್ಯಕ್ಕೆ ಬಂದು ಬಿಥೂನ್ಯಕ್ಕೆ ಹೋಗಲು ಪ್ರಯತ್ನ ಮಾಡಿದರು. ಆದರೆ ಆತ್ಮನು ಅವರನ್ನು ಹೋಗಗೊಡಿಸಲಿಲ್ಲ.
8ಹೀಗೆ ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು.
9ಆಗ ರಾತ್ರಿ ಕಾಲದಲ್ಲಿ ಪೌಲನಿಗೆ ಒಂದು ದರ್ಶನವಾಯಿತು; ಏನಂ ದರೆ--ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು--ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕು ಎಂದು ಅವನನ್ನು ಬೇಡಿಕೊಂಡನು.
10ಅವನು ಆ ದರ್ಶನವನ್ನು ನೋಡಿದ ತರುವಾಯ ಅವರಿಗೆ ಸುವಾರ್ತೆಯನ್ನು ಸಾರುವದಕ್ಕೆ ಕರ್ತನು ನಿಶ್ಚಯವಾಗಿ ನಮ್ಮನ್ನು ಕರೆದಿದ್ದಾನೆಂದು ತಿಳುಕೊಂಡು ಕೂಡಲೆ ಮಕೆದೋನ್ಯಕ್ಕೆ ಹೋಗುವಂತೆ ಪ್ರಯತ್ನಿ ಸಿದೆವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ