ಅಪೊಸ್ತಲರೂ ಹಿರಿಯರೂ ಈ ವಿಷಯವಾಗಿ ಆಲೋಚಿಸುವದಕ್ಕೆ ಕೂಡಿ ಬಂದಿರುವಾಗ
4ಅವರು ಯೆರೂಸಲೇಮಿಗೆ ಬಂದಮೇಲೆ ಸಭೆಯವರೂ ಅಪೊಸ್ತ ಲರೂ ಹಿರಿಯರೂ ಅವರನ್ನು ಸೇರಿಸಿಕೊಂಡಾಗ ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳನ್ನೆಲ್ಲಾ ಅವರಿಗೆ ವಿವರಿಸಿದರು.
5ಆದರೆ ಫರಿಸಾಯರ ಪಂಗಡದವರಲ್ಲಿ ನಂಬಿದ್ದ ಕೆಲವರು ಎದ್ದು--ಅವರಿಗೆ ಸುನ್ನತಿ ಮಾಡಿಸುವದು ಅವಶ್ಯವೆಂತಲೂ ಮೋಶೆಯ ನ್ಯಾಯಪ್ರಮಾಣವನ್ನು ಕೈಕೊಂಡು ನಡೆಯಬೇಕೆಂತಲೂ ಅವರಿಗೆ ಅಪ್ಪಣೆಕೊಡಬೇಕು ಎಂದು ಹೇಳಿ ದರು.
6ಅಪೊಸ್ತಲರೂ ಹಿರಿಯರೂ ಈ ವಿಷಯವಾಗಿ ಆಲೋಚಿಸುವದಕ್ಕೆ ಕೂಡಿ ಬಂದಿರುವಾಗ
7ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವ ರಿಗೆ--ಜನರೇ, ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬ ಬೇಕೆಂದು ದೇವರು ಬಹಳ ದಿವಸಗಳ ಕೆಳಗೆ ನಮ್ಮೊಳ ಗಿಂದ ಆರಿಸಿಕೊಂಡದ್ದು ನಿಮಗೇ ತಿಳಿದದೆ.
8ಹೃದಯ ಗಳನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮ ನನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಅವರ ವಿಷಯದಲ್ಲಿ ಸಾಕ್ಷಿಕೊಟ್ಟನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ