ಯೆಶಾಯ 50:9

ಇಗೋ, ಕರ್ತನಾದ ದೇವರು ನನಗೆ ಸಹಾಯ ಮಾಡುವನು; ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ಬಟ್ಟೆಯಂತಾಗುವರು; ಬಟ್ಟೆ ತಿನ್ನುವ ನುಸಿಯು ಅವರನ್ನು ತಿಂದುಬಿಡುವದು.

ಸಂದರ್ಭದೊಂದಿಗೆ ಓದಿ · ಯೆಶಾಯ 50

7ಕರ್ತನಾದ ದೇವರು ನನಗೆ ಸಹಾಯ ಮಾಡುವನು; ಆದಕಾರಣ ನಾನು ಆಶಾಭಂಗಪಡುವ ದಿಲ್ಲ; ಆದದರಿಂದ ನನ್ನ ಮುಖವನ್ನು ಬೆಣಚುಕಲ್ಲಿನಂತೆ ಮಾಡಿಕೊಂಡಿದ್ದೇನೆ; ನಾನು ನಾಚಿಕೆಪಡಲಾರೆನೆಂದು ನನಗೆ ಗೊತ್ತು.

8ನನಗೆ ನೀತಿ ನಿರ್ಣಯಿಸುವಾತನು ಸವಿಾಪದಲ್ಲಿಯೇ ಇದ್ದಾನೆ; ನನ್ನೊಂದಿಗೆ ಹೋರಾಡು ವವನು ಯಾರು? ನಾವು ಒಟ್ಟಿಗೆ ನಿಂತುಕೊಳ್ಳೋಣ, ನನ್ನ ಎದುರಾಳಿ ಯಾರು? ಅವನು ನನ್ನ ಸವಿಾಪಕ್ಕೆ ಬರಲಿ.

9ಇಗೋ, ಕರ್ತನಾದ ದೇವರು ನನಗೆ ಸಹಾಯ ಮಾಡುವನು; ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ಬಟ್ಟೆಯಂತಾಗುವರು; ಬಟ್ಟೆ ತಿನ್ನುವ ನುಸಿಯು ಅವರನ್ನು ತಿಂದುಬಿಡುವದು.

10ನಿಮ್ಮೊಳಗೆ ಕರ್ತನಿಗೆ ಭಯಪಟ್ಟು ಆತನ ಸೇವ ಕನ ಸ್ವರವನ್ನು ಕೇಳಿ ಬೆಳಕಿಲ್ಲದೆ ಕತ್ತಲೆಯಲ್ಲಿ ನಡೆ ಯುವವನು ಯಾರು? ಅವನು ಕರ್ತನ ಹೆಸರಿನಲ್ಲಿ ನಂಬಿಕೆಯಿಟ್ಟು ತನ್ನ ದೇವರ ಮೇಲೆ ಆತುಕೊಳ್ಳಲಿ.

11ಇಗೋ, ಕಿಡಿಗಳಿಂದ ಆವರಿಸಿಕೊಳ್ಳುವಂತೆ ಬೆಂಕಿ ಯನ್ನು ಹತ್ತಿಸಿಕೊಳ್ಳುವವರೆಲ್ಲರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ ನೀವು ಹತ್ತಿಸಿದ ಕಿಡಿಗಳಲ್ಲಿಯೂ ನಡೆಯಿರಿ. ನನ್ನ ಹಸ್ತದಿಂದ ನಿಮಗಾಗುವದು ಇದೇ; ನೀವು ದುಃಖದಲ್ಲಿ ಬಿದ್ದುಕೊಂಡಿರುವಿರಿ.

ಯೆಶಾಯ 50 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी