ಯೆಶಾಯ 54:6

ನೀನು ಬಿಡಲ್ಪಟ್ಟು ಆತ್ಮದಲ್ಲಿ ವ್ಯಥೆಪಟ್ಟ ಹೆಂಗಸು, ತ್ಯಜಿಸಲ್ಪಟ್ಟವಳಾದ ಯೌವನದ ಪತ್ನಿಯ ಹಾಗೆ ಇದ್ದಾಗ ಕರ್ತನು ನಿನ್ನನ್ನು ಕರೆದಿದ್ದಾನೆ ಎಂದು ನಿನ್ನ ದೇವರು ಹೇಳುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆಶಾಯ 54

4ಹೆದರಬೇಡ, ನಿನಗೆ ನಾಚಿಕೆಯಾಗುವದಿಲ್ಲ. ಇಲ್ಲವೆ ಗಾಬರಿ ಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತು ಬಿಡುವಿ ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವದಿಲ್ಲ.

5ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ; ಸೈನ್ಯಗಳ ಕರ್ತನು ಎಂಬದು ಆತನ ಹೆಸರು; ನಿನ್ನ ವಿಮೋಚಕನು ಇಸ್ರಾ ಯೇಲಿನ ಪರಿಶುದ್ಧನೇ; ಸಮಸ್ತ ಭೂಮಿಯ ದೇವರು ಎಂದು ಆತನು ಕರೆಯಲ್ಪಡುವನು.

6ನೀನು ಬಿಡಲ್ಪಟ್ಟು ಆತ್ಮದಲ್ಲಿ ವ್ಯಥೆಪಟ್ಟ ಹೆಂಗಸು, ತ್ಯಜಿಸಲ್ಪಟ್ಟವಳಾದ ಯೌವನದ ಪತ್ನಿಯ ಹಾಗೆ ಇದ್ದಾಗ ಕರ್ತನು ನಿನ್ನನ್ನು ಕರೆದಿದ್ದಾನೆ ಎಂದು ನಿನ್ನ ದೇವರು ಹೇಳುತ್ತಾನೆ.

7ಕ್ಷಣ ಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ; ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.

8ರೌದ್ರವೇರಿದಾಗ ನನ್ನ ಮುಖವನ್ನು ನಿನಗೆ ಕ್ಷಣ ಮಾತ್ರವೇ ಮರೆಮಾಡಿಕೊಂಡೆನು; ಆದರೆ ನಿರಂತರ ವಾದ ದಯದಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿ ದ್ದೇನೆ ಎಂದು ನಿನ್ನ ವಿಮೋಚಕನಾದ ಕರ್ತನು ಹೇಳು ತ್ತಾನೆ.

ಯೆಶಾಯ 54 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी