ಆದಿಕಾಂಡ 8:19

ಎಲ್ಲಾ ಮೃಗಗಳೂ ಕ್ರಿಮಿಗಳೂ ಪಕ್ಷಿಗಳೂ ಭೂಮಿ ಯಲ್ಲಿ ಹರಿದಾಡುವ ಎಲ್ಲವುಗಳು ತಮ್ಮತಮ್ಮ ಜಾತ್ಯಾ ನುಸಾರವಾಗಿ ನಾವೆಯೊಳಗಿಂದ ಹೊರಬಂದವು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 8

17ನಿನ್ನ ಸಂಗಡ ಇರುವ ಎಲ್ಲಾ ಶರೀರದ ಪಕ್ಷಿಗಳೂ ಮೃಗಗಳೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ ಎಲ್ಲಾ ಜೀವಜಂತುಗಳೂ ಭೂಮಿಯ ಮೇಲೆ ಅಭಿವೃದ್ಧಿಯಾಗಿ ಭೂಮಿಯಲ್ಲಿ ಹೆಚ್ಚುವ ಹಾಗೆ ಅವು ನಿನ್ನ ಸಂಗಡ ಹೊರಗೆ ಬರಮಾಡು ಅಂದನು.

18ಆಗ ನೋಹನ ಸಂಗಡ ಅವನ ಹೆಂಡತಿ ಕುಮಾರರು ಸೊಸೆಯರು ಹೊರಗೆ ಬಂದರು.

19ಎಲ್ಲಾ ಮೃಗಗಳೂ ಕ್ರಿಮಿಗಳೂ ಪಕ್ಷಿಗಳೂ ಭೂಮಿ ಯಲ್ಲಿ ಹರಿದಾಡುವ ಎಲ್ಲವುಗಳು ತಮ್ಮತಮ್ಮ ಜಾತ್ಯಾ ನುಸಾರವಾಗಿ ನಾವೆಯೊಳಗಿಂದ ಹೊರಬಂದವು.

20ನೋಹನು ಕರ್ತನಿಗೆ ಬಲಿಪೀಠವನ್ನು ಕಟ್ಟಿ ಶುದ್ಧವಾದ ಎಲ್ಲಾ ಪಶು ಪಕ್ಷಿಗಳಿಂದಲೂ (ಕೆಲವನ್ನು) ತೆಗೆದು ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು.

21ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ.

ಆದಿಕಾಂಡ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी