ಲೂಕನು 10:26

ಆತನು ಅವನಿಗೆ-- ನ್ಯಾಯಪ್ರಮಾಣದಲ್ಲಿ ಏನು ಬರೆದದೆ? ನೀನು ಹೇಗೆ ಓದುತ್ತೀ ಎಂದು ಕೇಳಿದನು.

ಸಂದರ್ಭದೊಂದಿಗೆ ಓದಿ · ಲೂಕನು 10

24ಯಾಕಂದರೆ ಅನೇಕ ಪ್ರವಾದಿಗಳೂ ಅರಸರೂ ನೀವು ನೋಡು ವಂಥವುಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳ ಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.

25ಆಗ ಇಗೋ, ಒಬ್ಬಾನೊಬ್ಬ ನ್ಯಾಯಶಾಸ್ತ್ರಿಯು ಎದ್ದು ನಿಂತು ಆತನನ್ನು ಶೋಧಿಸುವದಕ್ಕಾಗಿ-- ಬೋಧಕನೇ, ನಾನು ನಿತ್ಯಜೀವವನ್ನು ಬಾಧ್ಯವಾಗಿ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಿದನು.

26ಆತನು ಅವನಿಗೆ-- ನ್ಯಾಯಪ್ರಮಾಣದಲ್ಲಿ ಏನು ಬರೆದದೆ? ನೀನು ಹೇಗೆ ಓದುತ್ತೀ ಎಂದು ಕೇಳಿದನು.

27ಅದಕ್ಕೆ ಅವನು ಪ್ರತ್ಯುತ್ತರವಾಗಿ--ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯ ದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಮನಸ್ಸಿನಿಂ ದಲೂ ಪ್ರೀತಿಸಬೇಕು; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಅಂದನು.

28ಆಗ ಆತನು ಅವನಿಗೆ--ನೀನು ಸರಿಯಾಗಿ ಉತ್ತರ ಕೊಟ್ಟಿದ್ದೀ; ಅದರಂತೆಯೇ ಮಾಡು, ಆಗ ನೀನು ಬದುಕುವಿ ಅಂದನು.

ಲೂಕನು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी