ಯೆಶಾಯ 66:7

ಅವಳಿಗೆ ಪ್ರಸವವೇದನೆ ಆಗುವದಕ್ಕಿಂತ ಮುಂಚೆ ಹೆತ್ತಳು, ಅವಳಿಗೆ ನೋವು ಬರುವದಕ್ಕಿಂತ ಮುಂಚೆ ಗಂಡು ಮಗುವನ್ನು ಹೆತ್ತಳು.

ಸಂದರ್ಭದೊಂದಿಗೆ ಓದಿ · ಯೆಶಾಯ 66

5ಕರ್ತನ ವಾಕ್ಯವನ್ನು ಕೇಳಿರಿ, ಆತನ ವಾಕ್ಯಕ್ಕೆ ನಡಗುವವರೇ, ನಿಮ್ಮ ಸಹೋದರರು ನಿಮ್ಮನ್ನು ಹಗೆಮಾಡಿ ನನ್ನ ಹೆಸರಿಗೋಸ್ಕರ ನಿಮ್ಮನ್ನು ಹೊರಗೆ ಹಾಕಿ--ಕರ್ತನು ಮಹಿಮೆ ಹೊಂದಲೆಂದು ಹೇಳಿ ದ್ದಾರೆ; ಆದರೆ ಆತನು ನಿಮ್ಮ ಸಂತೋಷಕ್ಕಾಗಿ ಕಾಣಿಸಿ ಕೊಳ್ಳುವನು; ಅವರು ನಾಚಿಕೆಪಡುವರು.

6ಪಟ್ಟಣ ದೊಳಗಿನ ಗದ್ದಲದ ಶಬ್ದವೂ ದೇವಾಲಯದೊಳಗಿಂದ ಸ್ವರವೂ ತನ್ನ ಶತ್ರುಗಳಿಗೆ ಮುಯ್ಯಿಗೆಮುಯ್ಯಿ ತೀರಿ ಸುವ ಕರ್ತನ ಸ್ವರವಾಗಿದೆ.

7ಅವಳಿಗೆ ಪ್ರಸವವೇದನೆ ಆಗುವದಕ್ಕಿಂತ ಮುಂಚೆ ಹೆತ್ತಳು, ಅವಳಿಗೆ ನೋವು ಬರುವದಕ್ಕಿಂತ ಮುಂಚೆ ಗಂಡು ಮಗುವನ್ನು ಹೆತ್ತಳು.

8ಇಂಥಾದ್ದನ್ನು ಯಾರು ಕೇಳಿದ್ದಾರೆ? ಇಂಥವುಗಳನ್ನು ಯಾರು ನೋಡಿದ್ದಾರೆ? ಭೂಮಿ ಒಂದೇ ದಿವಸದಲ್ಲಿ ಹೆರುವಂತೆ ಮಾಡಿತೇ? ಅಥವಾ ಜನಾಂಗವು ಕ್ಷಣ ಮಾತ್ರದಲ್ಲಿ ಹುಟ್ಟೀತೇ? ಚೀಯೋನು ಪ್ರಸವವೇದನೆ ಪಟ್ಟಾಗಲೇ ತನ್ನ ಮಕ್ಕಳನ್ನು ಹೆತ್ತಳು.

9ನಾನು ಪ್ರಸವಕ್ಕೆ ತಂದ ಮೇಲೆ ಹೆರದಂತೆ ಮಾಡೆನೋ ಎಂದು ಕರ್ತನು ಹೇಳುತ್ತಾನೆ; ಇಲ್ಲವೆ ಹೆರುವಂತೆ ಮಾಡುವವನಾದ ನಾನು ಗರ್ಭವನ್ನು ಮುಚ್ಚುವೆನೇ ಎಂದು ನಿನ್ನ ದೇವರು ಹೇಳುತ್ತಾನೆ.

ಯೆಶಾಯ 66 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी