ಜೆಕರ್ಯ 8:8

ನಾನು ಅವರನ್ನು ತರುವೆನು; ಅವರು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವರು; ಅವರು ನನ್ನ ಜನರಾಗಿ ರುವರು; ನಾನು ಸತ್ಯದಲ್ಲಿಯೂ ನೀತಿಯಲ್ಲಿಯೂ ಅವರ ದೇವರಾಗಿರುವೆನು.

ಸಂದರ್ಭದೊಂದಿಗೆ ಓದಿ · ಜೆಕರ್ಯ 8

6ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇದು ಈ ದಿವಸಗಳಲ್ಲಿ ಉಳಿದ ಈ ಜನರ ಕಣ್ಣುಗಳಿಗೆ ಆಶ್ಚರ್ಯವಾಗಿ ತೋರಿ ದರೂ ಅದು ನನ್ನ ಕಣ್ಣುಗಳಿಗೂ ಸಹ ಆಶ್ಚರ್ಯವಾಗಿ ತೋರುವದೋ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.

7ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಜನರನ್ನು ಪೂರ್ವ ದಿಕ್ಕಿನ ದೇಶದಿಂದಲೂ ಪಶ್ಚಿಮ ದಿಕ್ಕಿನ ದೇಶದಿಂದಲೂ ರಕ್ಷಿಸುವೆನು.

8ನಾನು ಅವರನ್ನು ತರುವೆನು; ಅವರು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವರು; ಅವರು ನನ್ನ ಜನರಾಗಿ ರುವರು; ನಾನು ಸತ್ಯದಲ್ಲಿಯೂ ನೀತಿಯಲ್ಲಿಯೂ ಅವರ ದೇವರಾಗಿರುವೆನು.

9ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ದೇವಾಲಯವನ್ನು ಕಟ್ಟುವ ಹಾಗೆ ಸೈನ್ಯಗಳ ಕರ್ತನ ಆಲಯದ ಅಸ್ತಿವಾರವು ಹಾಕಲ್ಪಟ್ಟ ದಿವಸದಲ್ಲಿದ್ದ ಪ್ರವಾದಿಗಳ ಬಾಯಿಂದಾದ ಈ ವಾಕ್ಯಗಳನ್ನು ಈ ದಿವಸಗಳಲ್ಲಿ ಕೇಳುವವರೇ, ನಿಮ್ಮ ಕೈಗಳು ಬಲವಾಗಿರಲಿ.

10ಈ ದಿವಸಗಳಿಗಿಂತ ಮುಂಚೆ ಮನುಷ್ಯನಿಗೆ ಕೂಲಿ ಇರಲಿಲ್ಲ, ಪಶುಗಳಿಗೆ ಕೂಲಿ ಇರಲಿಲ್ಲ; ಇಲ್ಲವೆ ಹೋಗುವವ ನಿಗೂ ಬರುವವನಿಗೂ ಇಕ್ಕಟ್ಟಿನ ದೆಸೆಯಿಂದ ಸಮಾ ಧಾನವಿರಲಿಲ್ಲ. ನಾನು ಜನರೆಲ್ಲರಲ್ಲಿ ಪ್ರತಿಯೊಬ್ಬನನ್ನು ತನ್ನ ನೆರೆಯವನಿಗೆ ವಿರೋಧವಾಗಿ ಇಟ್ಟಿದ್ದೆನು.

ಜೆಕರ್ಯ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी