೧ ಸಮುವೇಲನು 15:9

ಸೌಲನು ಮತ್ತು ಜನರು ಅಗಾಗನನ್ನೂ ಪಶುಕುರಿಗಳಲ್ಲಿ ಮೇಲ್ತರವಾದ ವುಗಳನ್ನೂ ಉತ್ತಮವಾದ ಸಮಸ್ತವನ್ನೂ ಕನಿಕರಿಸಿದರು. ಅವುಗಳನ್ನು ಸಂಪೂರ್ಣ ನಾಶಮಾಡಲು ಮನಸ್ಸಿಲ್ಲದೆ ಇದ್ದನು. ಆದರೆ ತಿರಸ್ಕರಿಸಲ್ಪಡತಕ್ಕ ಕನಿಷ್ಠವಾದವು ಗಳನ್ನೆಲ್ಲಾ ಸಂಪೂರ್ಣ ನಾಶಮಾಡಿದರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 15

7ಆಗ ಸೌಲನು ಹವೀಲಾದಿಂದ ಐಗುಪ್ತಕ್ಕೆ ಎದುರಾಗಿರುವ ಶೂರಿಗೆ ಹೋಗುವ ಮೇರೆಯ ವರೆಗೂ ಇದ್ದ ಅಮಾಲೇಕ್ಯರನ್ನು ಹೊಡೆದು ಅಮಾಲೇಕ್ಯರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದನು.

8ಆದರೆ ಸಮಸ್ತ ಜನರನ್ನು ಕತ್ತಿಯಿಂದ ಸಂಪೂರ್ಣ ನಾಶಮಾಡಿದನು.

9ಸೌಲನು ಮತ್ತು ಜನರು ಅಗಾಗನನ್ನೂ ಪಶುಕುರಿಗಳಲ್ಲಿ ಮೇಲ್ತರವಾದ ವುಗಳನ್ನೂ ಉತ್ತಮವಾದ ಸಮಸ್ತವನ್ನೂ ಕನಿಕರಿಸಿದರು. ಅವುಗಳನ್ನು ಸಂಪೂರ್ಣ ನಾಶಮಾಡಲು ಮನಸ್ಸಿಲ್ಲದೆ ಇದ್ದನು. ಆದರೆ ತಿರಸ್ಕರಿಸಲ್ಪಡತಕ್ಕ ಕನಿಷ್ಠವಾದವು ಗಳನ್ನೆಲ್ಲಾ ಸಂಪೂರ್ಣ ನಾಶಮಾಡಿದರು.

10ಆಗ ಕರ್ತನ ವಾಕ್ಯವು ಸಮುವೇಲನಿಗೆ ಉಂಟಾ ಯಿತು, ಏನಂದರೆ--ನಾನು ಸೌಲನನ್ನು ಅರಸನನ್ನಾಗಿ ಮಾಡಿದ್ದರಿಂದ ಪಶ್ಚಾತ್ತಾಪಪಡುತ್ತೇನೆ.

11ಅವನು ನನ್ನನ್ನು ಹಿಂಬಾಲಿಸುವದನ್ನು ಬಿಟ್ಟು ಹಿಂದಕ್ಕೆ ಹೋದನು; ನನ್ನ ಆಜ್ಞೆಗಳನ್ನು ಈಡೇರಿಸಲಿಲ್ಲ ಅಂದನು. ಅದಕ್ಕೆ ಸಮುವೇಲನು ದುಃಖಪಟ್ಟವನಾಗಿ ರಾತ್ರಿಯೆಲ್ಲಾ ಕರ್ತನಿಗೆ ಮೊರೆಯಿಟ್ಟನು.

೧ ಸಮುವೇಲನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी