ಧರ್ಮೋಪದೇಶಕಾಂಡ 3:4

ಆ ಕಾಲದಲ್ಲಿ ಅವನ ಪಟ್ಟಣ ಗಳನ್ನೆಲ್ಲಾ ಹಿಡಿದೆವು; ನಾವು ಅವರಿಂದ ತಕ್ಕೊಳ್ಳದ ಪಟ್ಟಣವು ಇದ್ದಿಲ್ಲ. ಅರ್ಗೋಬಿನ ಸುತ್ತಲಿರುವ ದೇಶ ವೆಲ್ಲಾ ಅರವತ್ತು ಪಟ್ಟಣಗಳು; ಇವೇ ಬಾಷಾನಿನಲ್ಲಿ ಓಗನ ರಾಜ್ಯವು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 3

2ಆಗ ಕರ್ತನು ನನಗೆ--ಅವನಿಗೆ ಭಯಪಡಬೇಡ; ಅವ ನನ್ನೂ ಅವನ ಜನರೆಲ್ಲರನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಒಪ್ಪಿಸುತ್ತೇನೆ; ನೀನು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯರ ಅರಸನಾದ ಸೀಹೋನ ನಿಗೆ ಮಾಡಿದ ಪ್ರಕಾರ ಅವನಿಗೆ ಮಾಡಬೇಕು ಅಂದನು.

3ಈ ಪ್ರಕಾರ ನಮ್ಮ ದೇವರಾದ ಕರ್ತನು ಬಾಷಾನಿನ ಅರಸನಾದ ಓಗನನ್ನೂ ಅವನ ಜನರೆಲ್ಲ ರನ್ನೂ ನಮ್ಮ ಕೈಯಲ್ಲಿ ಒಪ್ಪಿಸಿದನು; ಒಬ್ಬನಾದರೂ ತಪ್ಪಿಸಿಕೊಂಡು ಅವನಿಗೆ ಉಳಿಯದೆ ಹೋಗುವ ವರೆಗೆ ಅವನನ್ನು ಹೊಡೆದೆವು.

4ಆ ಕಾಲದಲ್ಲಿ ಅವನ ಪಟ್ಟಣ ಗಳನ್ನೆಲ್ಲಾ ಹಿಡಿದೆವು; ನಾವು ಅವರಿಂದ ತಕ್ಕೊಳ್ಳದ ಪಟ್ಟಣವು ಇದ್ದಿಲ್ಲ. ಅರ್ಗೋಬಿನ ಸುತ್ತಲಿರುವ ದೇಶ ವೆಲ್ಲಾ ಅರವತ್ತು ಪಟ್ಟಣಗಳು; ಇವೇ ಬಾಷಾನಿನಲ್ಲಿ ಓಗನ ರಾಜ್ಯವು.

5ಆ ಪಟ್ಟಣಗಳೆಲ್ಲಾ ಎತ್ತರವಾದ ಗೋಡೆಬಾಗಲು ಅಗುಳಿಗಳಿಂದ ಭದ್ರವಾಗಿದ್ದವು; ಅವುಗಳಲ್ಲದೆ ಬೈಲು ಸೀಮೆಯ ಪಟ್ಟಣಗಳು ಬಹಳ ಇದ್ದವು.

6ನಾವು ಹೆಷ್ಬೋನಿನ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು; ಗಂಡಸರನ್ನೂ ಹೆಂಗಸರನ್ನೂ ಮಕ್ಕ ಳನ್ನೂ ಪ್ರತಿಯೊಂದು ಪಟ್ಟಣವನ್ನೂ ಸಂಪೂರ್ಣ ವಾಗಿ ನಿರ್ಮೂಲಮಾಡಿದೆವು.

ಧರ್ಮೋಪದೇಶಕಾಂಡ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी