೧ ಅರಸುಗಳು 3:19

ಮನೆಯಲ್ಲಿ ನಮ್ಮ ಇಬ್ಬರ ಹೊರತು ನಮ್ಮ ಸಂಗಡ ಮತ್ತಾರೂ ಇಲ್ಲ. ಆದರೆ ಅವಳು ಅದರ ಮೇಲೆ ಹೊರಳಿದ್ದರಿಂದ ರಾತ್ರಿಯಲ್ಲಿ ಈ ಹೆಂಗಸಿನ ಮಗುವು ಸತ್ತು ಹೋಯಿತು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 3

17ಅವರಲ್ಲಿ ಒಬ್ಬಳು--ಓ ನನ್ನ ಒಡೆಯನೇ, ನಾನೂ ಈ ಹೆಂಗಸೂ ಒಂದೇ ಮನೆಯಲ್ಲಿ ವಾಸವಾಗಿದ್ದೇವೆ.

18ನಾನು ಅವಳ ಸಂಗಡ ಮನೆಯಲ್ಲಿರುವಾಗ ಮಗುವನ್ನು ಹೆತ್ತೆನು. ನಾನು ಹೆತ್ತ ಮೂರು ದಿವಸಗಳ ತರುವಾಯ ಈ ಹೆಂಗಸು ಕೂಡ ಹೆತ್ತಳು. ನಾವು ಇಬ್ಬರೂ ಕೂಡಿಯೇ ಇದ್ದೆವು.

19ಮನೆಯಲ್ಲಿ ನಮ್ಮ ಇಬ್ಬರ ಹೊರತು ನಮ್ಮ ಸಂಗಡ ಮತ್ತಾರೂ ಇಲ್ಲ. ಆದರೆ ಅವಳು ಅದರ ಮೇಲೆ ಹೊರಳಿದ್ದರಿಂದ ರಾತ್ರಿಯಲ್ಲಿ ಈ ಹೆಂಗಸಿನ ಮಗುವು ಸತ್ತು ಹೋಯಿತು.

20ಇವಳು ಮಧ್ಯರಾತ್ರಿಯಲ್ಲಿ ಎದ್ದು ನಿನ್ನ ದಾಸಿಯು ನಿದ್ರೆ ಗೈಯುತ್ತಿರುವಾಗ ನನ್ನ ಹತ್ತಿರ ಮಲಗಿದ್ದ ನನ್ನ ಮಗ ನನ್ನು ತೆಗೆದುಕೊಂಡು ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು.

21ಉದಯದಲ್ಲಿ ನನ್ನ ಕೂಸಿಗೆ ಮೊಲೆ ಕೊಡಲು ಎದ್ದಾಗ ಇಗೋ, ಅದು ಸತ್ತಿತ್ತು. ಉದಯದಲ್ಲಿ ಅದನ್ನು ಯೋಚಿಸಿದಾಗ ಇಗೋ, ಅದು ನಾನು ಹೆತ್ತ ಮಗುವಾಗಿದ್ದಿಲ್ಲ ಅಂದಳು.

೧ ಅರಸುಗಳು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी