ಯೆಹೆಜ್ಕೇಲನು 13:13

ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅದನ್ನು ನನ್ನ ಉರಿಯಲ್ಲಿ ಬಿರುಗಾಳಿಯಿಂದ ಸೀಳಿಬಿಡುವೆನು. ಅದನ್ನು ನಾಶ ಪಡಿಸುವ ಹಾಗೆ ನನ್ನ ಕೋಪದಿಂದ ವಿಪರೀತ ಮಳೆಯೂ ನನ್ನ ಉರಿಯಿಂದ ಕಲ್ಮಳೆಯ ಕಲ್ಲುಗಳೂ ಸುರಿಯುವವು;

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 13

11ಸುಣ್ಣ ಹಚ್ಚುತ್ತಿರುವವನಿಗೆ--ಅದು ಬೀಳುವದೆಂದು ಹೇಳು; ಅಲ್ಲಿ ವಿಪರೀತ ಮಳೆ ಬರುವದು ಮತ್ತು ದೊಡ್ಡ ಕಲ್ಮಳೆಯು ಬೀಳುವದು; ಬಿರುಗಾಳಿಯು ಅದನ್ನು ಸೀಳಿಬಿಡುವದು.

12ಇಗೋ, ಗೋಡೆ ಬಿದ್ದು ಹೋದಮೇಲೆ--ನೀವು ಹಚ್ಚಿದ ಸುಣ್ಣ ಎಲ್ಲಿ ಎಂದು ನಿಮಗೆ ಹೇಳುವರಲ್ಲಾ?

13ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅದನ್ನು ನನ್ನ ಉರಿಯಲ್ಲಿ ಬಿರುಗಾಳಿಯಿಂದ ಸೀಳಿಬಿಡುವೆನು. ಅದನ್ನು ನಾಶ ಪಡಿಸುವ ಹಾಗೆ ನನ್ನ ಕೋಪದಿಂದ ವಿಪರೀತ ಮಳೆಯೂ ನನ್ನ ಉರಿಯಿಂದ ಕಲ್ಮಳೆಯ ಕಲ್ಲುಗಳೂ ಸುರಿಯುವವು;

14ನೀವು ಸುಣ್ಣ ಬಳಿದ ಗೋಡೆಯನ್ನು ನಾನು ಈಗ ಕೆಡವಿ ನೆಲಸಮ ಮಾಡಿ ಅದರ ಅಸ್ತಿವಾರ ವನ್ನು ಕಾಣದ ಹಾಗೆ ಮಾಡುವೆನು. ಅದು ಬಿದ್ದು ಹೋಗುವದು, ನೀವು ಅದರಲ್ಲಿ ನಾಶ ಮಾಡಲ್ಪಡು ವಿರಿ. ಆಗ ನಾನೇ ಕರ್ತನೆಂದು ನಿಮಗೆ ತಿಳಿದು ಬರುವದು.

15ಹೀಗೆ ನಾನು ಗೋಡೆಯಲ್ಲಿಯೂ ಅದಕ್ಕೆ ಸುಣ್ಣ ಬಳಿದವರಲ್ಲಿಯೂ ರೋಷವನ್ನು ತೀರಿಸಿ ಕೊಂಡು ಇನ್ನು ಗೋಡೆಯಾದರೂ ಅದಕ್ಕೆ ಸುಣ್ಣ ಹಚ್ಚಿದವರಾದರೂ ಇಲ್ಲವೆಂದು

ಯೆಹೆಜ್ಕೇಲನು 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी