ಯಾಜಕಕಾಂಡ 5:6

ಅವನು ತಾನು ಮಾಡಿದ ಪಾಪಕ್ಕಾಗಿ ಕರ್ತನಿಗೆ ಅಪರಾಧ ಬಲಿಯನ್ನು ಪಾಪದ ಬಲಿಗಾಗಿ ಮಂದೆಯಿಂದ ಒಂದು ಹೆಣ್ಣುಕುರಿ ಇಲ್ಲವೆ ಮೇಕೆಗಳಲ್ಲಿ ಒಂದು ಮರಿಯನ್ನು ತರಬೇಕು; ಯಾಜಕನು ಅವನ ಪಾಪದ ವಿಷಯದಲ್ಲಿ ಪ್ರಾಯಶ್ಚಿತ್ತ ಮಾಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 5

4ಇಲ್ಲವೆ ಒಬ್ಬನು ಆಣೆಯಿಟ್ಟು ಕೆಟ್ಟದ್ದನ್ನಾಗಲಿ ಒಳ್ಳೆಯದನ್ನಾಗಲಿ ಮಾಡುವದನ್ನು ತನ್ನ ತುಟಿಗಳಿಂದ ಉಚ್ಚರಿಸಿ ಪ್ರಮಾಣದೊಡನೆ ಉಚ್ಚರಿಸಿದ್ದು ಯಾವದೇ ಆಗಿರಲಿ ಅದು ಅವನಿಗೆ ತಿಳಿಯದೆ ಇದ್ದು ತರುವಾಯ ತಿಳಿದಾಗ ಇವುಗಳಲ್ಲೊಂದರಲ್ಲಿ ಅವನು ಅಪರಾಧಿಯಾಗಿರುವನು.

5ಅವನು ಇವುಗಳಲ್ಲೊಂದ ರಲ್ಲಿ ಅಪರಾಧಿಯಾಗಿದ್ದು ತಾನು ಅದರಲ್ಲಿ ಪಾಪಮಾಡಿ ದ್ದೇನೆಂದು ಅರಿಕೆ ಮಾಡುವದಾದರೆ

6ಅವನು ತಾನು ಮಾಡಿದ ಪಾಪಕ್ಕಾಗಿ ಕರ್ತನಿಗೆ ಅಪರಾಧ ಬಲಿಯನ್ನು ಪಾಪದ ಬಲಿಗಾಗಿ ಮಂದೆಯಿಂದ ಒಂದು ಹೆಣ್ಣುಕುರಿ ಇಲ್ಲವೆ ಮೇಕೆಗಳಲ್ಲಿ ಒಂದು ಮರಿಯನ್ನು ತರಬೇಕು; ಯಾಜಕನು ಅವನ ಪಾಪದ ವಿಷಯದಲ್ಲಿ ಪ್ರಾಯಶ್ಚಿತ್ತ ಮಾಡಬೇಕು.

7ಅವನು ಒಂದು ಕುರಿಮರಿಯನ್ನು ತರುವದಕ್ಕೆ ಅಶಕ್ತನಾಗಿದ್ದರೆ ತಾನು ಮಾಡಿದ ಅಪರಾಧಕ್ಕಾಗಿ ಎರಡು ಬೆಳವಗಳನ್ನಾಗಲಿ ಇಲ್ಲವೆ ಎರಡು ಪಾರಿವಾಳದ ಮರಿ ಗಳನ್ನಾಗಲಿ ಕರ್ತನಿಗೆ ತರಬೇಕು; ಒಂದನ್ನು ಪಾಪದ ಬಲಿಗಾಗಿ ಮತ್ತೊಂದನ್ನು ದಹನಬಲಿಗಾಗಿ ತರಬೇಕು.

8ಅವನು ಅವುಗಳನ್ನು ಯಾಜಕರ ಬಳಿಗೆ ತಂದಾಗ ಪಾಪದ ಬಲಿಗೆ ತಂದಿರುವದನ್ನು ಮೊದಲು ಸಮರ್ಪಿಸಿ ಅದರ ತಲೆಯನ್ನು ಕುತ್ತಿಗೆಯಿಂದ ಮುರಿಯಬೇಕು, ಅದನ್ನು ವಿಭಾಗಿಸಬಾರದು.

ಯಾಜಕಕಾಂಡ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी