ಲೂಕನು 6:6

ಇದಾದ ಮೇಲೆ ಇನ್ನೊಂದು ಸಬ್ಬತ್ತಿನಲ್ಲಿ ಸಹ ಆತನು ಸಭಾಮಂದಿರದೊಳಕ್ಕೆ ಪ್ರವೇಶಿಸಿ ಬೋಧಿಸಿ ದನು; ಅಲ್ಲಿ ಬಲಗೈ ಬತ್ತಿದ ಒಬ್ಬ ಮನುಷ್ಯನಿದ್ದನು.

ಸಂದರ್ಭದೊಂದಿಗೆ ಓದಿ · ಲೂಕನು 6

4ಅವನು ದೇವರ ಮನೆಯೊಳಗೆ ಹೋಗಿ ಯಾಜಕರು ಹೊರತು ಬೇರೆಯವರು ತಿನ್ನುವದು ನ್ಯಾಯವಲ್ಲದ ಸಮ್ಮುಖ ರೊಟ್ಟಿಯನ್ನು ತೆಗೆದುಕೊಂಡು ತಿಂದು ತನ್ನ ಜೊತೆಯಲ್ಲಿದ್ದವರಿಗೆ ಸಹ ಹೇಗೆ ಕೊಟ್ಟನೆಂಬದನು ನೀವು ಓದಲಿಲ್ಲವೇ ಅಂದನು.

5ಆತನು ಅವ ರಿಗೆ--ಮನುಷ್ಯಕುಮಾರನು ಸಬ್ಬತ್ತಿಗೂ ಒಡೆಯನಾಗಿ ದ್ದಾನೆ ಅಂದನು.

6ಇದಾದ ಮೇಲೆ ಇನ್ನೊಂದು ಸಬ್ಬತ್ತಿನಲ್ಲಿ ಸಹ ಆತನು ಸಭಾಮಂದಿರದೊಳಕ್ಕೆ ಪ್ರವೇಶಿಸಿ ಬೋಧಿಸಿ ದನು; ಅಲ್ಲಿ ಬಲಗೈ ಬತ್ತಿದ ಒಬ್ಬ ಮನುಷ್ಯನಿದ್ದನು.

7ಆಗ ಶಾಸ್ತ್ರಿಗಳೂ ಫರಿಸಾಯರೂ ಆತನಿಗೆ ವಿರೋಧ ವಾಗಿ ತಪ್ಪು ಕಂಡುಹಿಡಿಯಬೇಕೆಂದು ಆತನು ಆ ಸಬ್ಬತ್‌ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೇನೋ ಎಂದು ಕಾಯುತ್ತಿದ್ದರು.

8ಆದರೆ ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಕೈ ಬತ್ತಿದವನಾದ ಆ ಮನುಷ್ಯನಿಗೆ--ಎದ್ದು ನಡುವೆ ನಿಂತುಕೋ ಅಂದಾಗ ಅವನು ಎದ್ದು ನಿಂತುಕೊಂಡನು.

ಲೂಕನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी