ಯೆಶಾಯ 60:17

ಹಿತ್ತಾಳೆಗೆ ಬದಲಾಗಿ ಬಂಗಾರವನ್ನು ತರುವೆನು; ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ ಮರಕ್ಕೆ ಬದಲಾಗಿ ಹಿತ್ತಾಳೆಯನ್ನೂ ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು, ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿಯೂ ನೀತಿಯನ್ನು ನಿನಗೆ ಅಧಿಕಾರಿ ಯನ್ನಾಗಿಯೂ ಮಾಡುವೆನು.

ಸಂದರ್ಭದೊಂದಿಗೆ ಓದಿ · ಯೆಶಾಯ 60

15ಹಾದುಹೋಗುವವರಿಲ್ಲದೆ ನೀನು ಬಿಡಲ್ಪಟ್ಟವಳೂ ಹಗೆ ಮಾಡಲ್ಪಟ್ಟವಳೂ ಆಗಿ ದ್ದಕ್ಕೆ ಬದಲಾಗಿ ನಿನ್ನನ್ನು ನಿತ್ಯವಾದ ಘನತೆಯೂ ಅನೇಕ ಸಂತತಿಗಳಲ್ಲಿ ಉಲ್ಲಾಸವಾಗಿಯೂ ಮಾಡು ತ್ತೇನೆ.

16ಅನ್ಯಜನಾಂಗಗಳ ಹಾಲನ್ನು ಹೀರಿಕೊಳ್ಳುವಿ; ಅರಸರ ಮೊಲೆಯನ್ನು ಸಹ ಹೀರಿಕೊಳ್ಳುವಿ; ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋ ಚಕನೂ ಯಾಕೋಬನ ಪರಾಕ್ರಮಿಯೂ ಎಂದು ತಿಳುಕೊಳ್ಳುವಿ.

17ಹಿತ್ತಾಳೆಗೆ ಬದಲಾಗಿ ಬಂಗಾರವನ್ನು ತರುವೆನು; ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ ಮರಕ್ಕೆ ಬದಲಾಗಿ ಹಿತ್ತಾಳೆಯನ್ನೂ ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು, ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿಯೂ ನೀತಿಯನ್ನು ನಿನಗೆ ಅಧಿಕಾರಿ ಯನ್ನಾಗಿಯೂ ಮಾಡುವೆನು.

18ಬಲಾತ್ಕಾರವೂ ನಿನ್ನ ದೇಶದೊಳಗೆ ಹಾಳಾದದ್ದೂ ನಾಶವೂ ನಿನ್ನ ಮೇರೆ ಗಳಲ್ಲಿ ಕೇಳಲ್ಪಡುವದಿಲ್ಲ; ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿ ಡುವಿ.

19ಇನ್ನು ಮೇಲೆ ಸೂರ್ಯನು ನಿನಗೆ ಹಗಲಿ ನಲ್ಲಿ ಬೆಳಕಾಗಿರುವದಿಲ್ಲ, ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವದಿಲ್ಲ; ಆದರೆ ಕರ್ತನು ನಿನಗೆ ನಿತ್ಯವಾದ ಬೆಳಕಾಗಿರುವನು. ನಿನ್ನ ದೇವರು ನಿನ್ನ ಪ್ರಭೆಯಾಗಿರುವನು.

ಯೆಶಾಯ 60 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी