ಆದಿಕಾಂಡ 19:17

ಅವರನ್ನು ಹೊರಗೆ ತಂದ ಮೇಲೆ ಆತನು--ನಿನ್ನ ಪ್ರಾಣಕ್ಕೋಸ್ಕರ ತಪ್ಪಿಸಿಕೋ; ನಿನ್ನ ಹಿಂದೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ, ನೀನು ನಾಶ ವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗು ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 19

15ಸೂರ್ಯೋದಯವಾದಾಗ ದೂತರು ಲೋಟನನ್ನು ತ್ವರೆಪಡಿಸಿ--ನೀನು ಈ ಪಟ್ಟಣದ ದುಷ್ಟತನದಿಂದ ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಇಬ್ಬರು ಕುಮಾರ್ತೆಯರನ್ನೂ ಕರಕೊಂಡು ನಡೆ ಅಂದರು.

16ಅವರು ತಡಮಾಡಿದಾಗ ಕರ್ತನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಅವನ ಇಬ್ಬರು ಕುಮಾರ್ತೆಯರ ಕೈಯನ್ನೂ ಹಿಡಿದು, ಅವನನ್ನು ಪಟ್ಟಣದ ಹೊರಗೆ ತಂದುಬಿಟ್ಟರು;

17ಅವರನ್ನು ಹೊರಗೆ ತಂದ ಮೇಲೆ ಆತನು--ನಿನ್ನ ಪ್ರಾಣಕ್ಕೋಸ್ಕರ ತಪ್ಪಿಸಿಕೋ; ನಿನ್ನ ಹಿಂದೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ, ನೀನು ನಾಶ ವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗು ಅಂದನು.

18ಲೋಟನು ಅವರಿಗೆ--ಹಾಗಲ್ಲ, ನನ್ನ ಕರ್ತನೇ,

19ಇಗೋ, ಈಗ ನಿನ್ನ ದಾಸನಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಿದೆ. ನನ್ನ ಪ್ರಾಣವನ್ನು ಉಳಿಸುವ ಹಾಗೆ ನೀನು ನನಗೆ ಮಾಡಿದ ಕೃಪೆಯನ್ನು ಘನಪಡಿಸಿದ್ದೀ. ಆದರೆ ನಾನು ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗಲಾರೆನು; ನನಗೆ ಕೇಡು ಉಂಟಾಗಿ ನಾನು ಸತ್ತೇನು;

ಆದಿಕಾಂಡ 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी