೧ ಅರಸುಗಳು 7:28

ಆ ಆಧಾರಗಳ ಮೇಲಿರುವ ಕೆಲಸ ಹೇಗಂದರೆ, ಅವುಗಳಿಗೆ ಅಂಚುಗಳಿದ್ದವು. ಅಂಚುಗಳು ಹಲಿಗೆಗಳ ನಡುವೆ ಇದ್ದವು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 7

26ಅದರ ದಪ್ಪವು ಕೈಯಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ಎರಡು ಸಾವಿರ ಕೊಳಗ ಹಿಡಿಯು ವದಾಗಿತ್ತು.

27ಹತ್ತು ತಾಮ್ರದ ಆಧಾರಗಳನ್ನು ಮಾಡಿದನು. ಒಂದೊಂದು ಆಧಾರವು ನಾಲ್ಕು ಮೊಳ ಉದ್ದವೂ ನಾಲ್ಕು ಮೊಳ ಅಗಲವೂ ಮೂರು ಮೊಳ ಎತ್ತರವೂ ಆಗಿತ್ತು.

28ಆ ಆಧಾರಗಳ ಮೇಲಿರುವ ಕೆಲಸ ಹೇಗಂದರೆ, ಅವುಗಳಿಗೆ ಅಂಚುಗಳಿದ್ದವು. ಅಂಚುಗಳು ಹಲಿಗೆಗಳ ನಡುವೆ ಇದ್ದವು.

29ಹಲಿಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ ಎತ್ತುಗಳೂ ಕೆರೂಬಿಗಳೂ ಇದ್ದವು. ಹಲಿಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು; ಸಿಂಹಗಳಿಗೂ ಎತ್ತುಗಳಿಗೂ ಕೆಳಭಾಗದಲ್ಲಿ ಕೆರೂಬಿಗಳ ಕೆಲಸಗಳು ಅದರ ಸಂಗಡ ಇದ್ದವು.

30ಒಂದೊಂದು ಆಧಾರಕ್ಕೆ ನಾಲ್ಕು ತಾಮ್ರದ ಗಾಲಿಗಳೂ ತಾಮ್ರದ ತಗಡುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಜೋಡಣೆಗಳಿದ್ದವು. ಸಮು ದ್ರದ ಕೆಳಗೆ ಇರುವ ಪ್ರತಿ ಕೆರೂಬಿಯ ಬಳಿಯಲ್ಲೂ ಎರಕ ಹೊಯ್ಯಲ್ಪಟ್ಟ ಜೋಡಣೆಗಳಿದ್ದವು.

೧ ಅರಸುಗಳು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी