ಪ್ರಲಾಪಗಳು 1:13

ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.

ಸಂದರ್ಭದೊಂದಿಗೆ ಓದಿ · ಪ್ರಲಾಪಗಳು 1

11ಅವಳ ಜನರೆಲ್ಲಾ ನಿಟ್ಟುಸಿರು ಬಿಡುತ್ತಾರೆ. ಅವರು ರೊಟ್ಟಿಯನ್ನು ಹುಡುಕುತ್ತಾರೆ. ಅವರು ಪ್ರಾಣವನ್ನು ಉಳಿಸಿಕೊಳ್ಳಲು ತಮ್ಮ ರಮ್ಯವಾದವುಗಳನ್ನು ಆಹಾರ ಕ್ಕಾಗಿ ಕೊಟ್ಟಿದ್ದಾರೆ. ಓ ಕರ್ತನೇ, ನೋಡು, ಲಕ್ಷಿಸು; ನಾನು ಭ್ರಷ್ಠಳಾದೆನು.

12ಹಾದು ಹೋಗುವ ವರೆಲ್ಲರೇ, ಇದು ನಿಮಗೆ ಏನೂ ಅಲ್ಲವೋ? ಇಗೋ, ಕರ್ತನ ಕೋಪ ಉರಿಯುವ ದಿನದಲ್ಲಿ ನನ್ನನ್ನು ಸಂಕಟಪಡಿಸಿದ ನನ್ನ ದುಃಖದ ಹಾಗೆ ಬೇರೆ ಯಾವ ದುಃಖವಾದರೂ ಇದ್ದರೆ ನೋಡಿರಿ.

13ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.

14ನನ್ನ ಅಕ್ರಮಗಳ ನೊಗವು ಆತನ ಕೈಯಿಂದ ಕಟ್ಟಲ್ಪಟ್ಟಿದೆ; ಅವು ಹೆಣೆಯಲ್ಪಟ್ಟಿವೆ; ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; ಮೇಲೆ ಬರುತ್ತವೆ. ಆತನು ನನ್ನ ಶಕ್ತಿಯು ಕುಗ್ಗುವ ಹಾಗೆ ಮಾಡಿದನು, ಕರ್ತನು ನನ್ನನ್ನು ಅವರ ಕೈಗಳಿಗೆ ಒಪ್ಪಿಸಿ ಅವರಿಂದ ನಾನು ಎದ್ದೇಳಲು ಶಕ್ತನಾಗದಂತೆ ಮಾಡಿದ್ದಾನೆ.

15ಕರ್ತನು ನನ್ನ ಎದುರಿನಲ್ಲಿ ನನ್ನ ಪರಾಕ್ರಮಶಾಲಿಗಳನ್ನೆಲ್ಲಾ ಕಾಲಿನ ಕೆಳಗೆ ತುಳಿದುಬಿಟ್ಟಿದ್ದಾನೆ; ಆತನು ನನ್ನ ಯೌವನಸ್ಥರನ್ನು ಜಜ್ಜಲು ನನಗೆ ವಿರುದ್ಧವಾಗಿ ಸಭೆಯನ್ನು ಕರೆದಿದ್ದಾನೆ; ಕರ್ತನು ಯೆಹೂದದ ಮಗಳಾದ ಕನ್ಯೆಯನ್ನು ದ್ರಾಕ್ಷೆಯ ತೊಟ್ಟಿಯಂತೆ ತುಳಿದಿದ್ದಾನೆ.

ಪ್ರಲಾಪಗಳು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी