ಆದರೆ ದೋಷವಿರುವ ಯಾವದನ್ನೂ ಸಮರ್ಪಿಸ ಬಾರದು; ಅದು ನಿಮಗೋಸ್ಕರ ಅಂಗೀಕಾರವಾಗು ವದಿಲ್ಲ.
18ಆರೋನನೊಂದಿಗೂ ಅವನ ಕುಮಾರರೊಂದಿಗೂ ಇಸ್ರಾಯೇಲ್ ಎಲ್ಲಾ ಮಕ್ಕ ಳೊಂದಿಗೂ ಮಾತನಾಡಿ ಅವರಿಗೆ ಹೇಳಬೇಕಾದ ದ್ದೇನಂದರೆ--ಇಸ್ರಾಯೇಲ್ ಮನೆತನದವರಲ್ಲಾಗಲಿ ಇಸ್ರಾಯೇಲ್ಯರ ಪರಕೀಯರಲ್ಲಾಗಲಿ ಯಾವನಾದರೂ ತನ್ನ ಎಲ್ಲಾ ಪ್ರಮಾಣಗಳ ನಿಮಿತ್ತವಾಗಿ ಕಾಣಿಕೆಯನ್ನು ದಹನಬಲಿಯಾಗಿ ಕರ್ತನಿಗೆ ಅರ್ಪಿಸುವ ಉಚಿತವಾದ ಅರ್ಪಣೆಗಳಲ್ಲಿ
19ನೀವು ನಿಮ್ಮ ಸ್ವಇಚ್ಛೆಯಿಂದ ಪಶುಗಳೊಳಗೆ ಕುರಿಗಳೊಳಗೆ ಇಲ್ಲವೆ ಮೇಕೆಗಳೊಳಗೆ ದೋಷವಿಲ್ಲದ ಗಂಡಾಗಿರುವದನ್ನು ಅರ್ಪಿಸಬೇಕು;
20ಆದರೆ ದೋಷವಿರುವ ಯಾವದನ್ನೂ ಸಮರ್ಪಿಸ ಬಾರದು; ಅದು ನಿಮಗೋಸ್ಕರ ಅಂಗೀಕಾರವಾಗು ವದಿಲ್ಲ.
21ತನ್ನ ಪ್ರಮಾಣವನ್ನು ಪೂರೈಸುವ ಹಾಗೆ ಯಾವನಾದರೂ ಸಮಾಧಾನದ ಬಲಿಗಳ ಯಜ್ಞ ಸಮರ್ಪಣೆಯನ್ನಾಗಲಿ ಪಶುಗಳನ್ನಾಗಲಿ ಕುರಿಗಳ ನ್ನಾಗಲಿ ಉಚಿತವಾದ ಕಾಣಿಕೆಯನ್ನು ಕರ್ತನಿಗೆ ಅರ್ಪಿಸುವದಾದರೆ ಅದು ಅಂಗೀಕಾರಕ್ಕೆ ಪರಿಪೂರ್ಣ ವುಳ್ಳದ್ದಾಗಿರಬೇಕು; ಅದರೊಳಗೆ ಯಾವ ದೋಷವು ಇರಬಾರದು.
22ಕುರುಡಾದದ್ದು, ಮುರಿದದ್ದು, ಅಂಗ ಹೀನವಾದದ್ದು, ಬೊಕ್ಕೆಯುಳ್ಳದ್ದು, ತುರಿಯುಳ್ಳದ್ದು, ಇಲ್ಲವೆ ಹುರುಕುಳ್ಳದ್ದು ಇವುಗಳನ್ನು ನೀವು ಕರ್ತನಿಗೆ ಸಮರ್ಪಿಸಲೂಬಾರದು ಮತ್ತು ಅವುಗಳಿಂದ ಯಜ್ಞ ವೇದಿಯ ಮೇಲೆ ದಹನಬಲಿಯಾಗಿ ಕರ್ತನಿಗೆ ಸಮರ್ಪಿಸಲೂಬಾರದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ