೧ ಸಮುವೇಲನು 1:15

ಅದಕ್ಕೆ ಹನ್ನಳು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆನನ್ನ ಒಡೆಯನೇ, ಹಾಗಲ್ಲ, ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ; ನಾನು ದ್ರಾಕ್ಷಾರಸವನ್ನಾದರೂ ಮದ್ಯ ಪಾನವನ್ನಾದರೂ ಕುಡಿದವಳಲ್ಲ. ನಾನು ಕರ್ತನ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ಹೊಯಿದು ಬಿಟ್ಟೆನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 1

13ಹನ್ನಳು ತನ್ನ ಹೃದಯದಲ್ಲೇ ಮಾತನಾಡುತ್ತಾ ತನ್ನ ತುಟಿಗಳನ್ನು ಮಾತ್ರ ಆಡಿಸುತ್ತಾ ಇದ್ದದರಿಂದ ಅವಳ ಶಬ್ದವು ಕೇಳಲ್ಪಡದೆ ಇತ್ತು. ಆದದರಿಂದ, ಅವಳು ಅಮಲೇರಿದವಳಾಗಿದ್ದಾಳೆಂದು ಏಲಿಯು ನೆನಸಿದನು.

14ಏಲಿಯು ಅವಳಿಗೆ--ಎಷ್ಟರ ವರೆಗೆ ಅಮಲೇರಿದವಳಾಗಿರುವಿ? ದ್ರಾಕ್ಷಾರಸದ ಮತ್ತು ನಿನ್ನನ್ನು ಬಿಟ್ಟು ಹೋಗಲಿ ಅಂದನು.

15ಅದಕ್ಕೆ ಹನ್ನಳು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆನನ್ನ ಒಡೆಯನೇ, ಹಾಗಲ್ಲ, ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ; ನಾನು ದ್ರಾಕ್ಷಾರಸವನ್ನಾದರೂ ಮದ್ಯ ಪಾನವನ್ನಾದರೂ ಕುಡಿದವಳಲ್ಲ. ನಾನು ಕರ್ತನ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ಹೊಯಿದು ಬಿಟ್ಟೆನು.

16ನಿನ್ನ ದಾಸಿಯನ್ನು ಬೆಲಿಯಾಳನ ಮಗಳೆಂದು ನೆನಸಬೇಡ; ಯಾಕಂದರೆ ನನ್ನ ಹೆಚ್ಚಾದ ಚಿಂತೆಯಿಂದಲೂ ದುಃಖದಿಂದಲೂ ಈ ವರೆಗೂ ಮಾತನಾಡಿಕೊಳ್ಳುತ್ತಾ ಇದ್ದೆನು ಅಂದಳು.

17ಆಗ ಏಲಿಯು ಅವಳಿಗೆ ಪ್ರತ್ಯುತ್ತರವಾಗಿ--ಸಮಾಧಾನ ದಿಂದ ಹೋಗು; ಇಸ್ರಾಯೇಲಿನ ದೇವರು, ಆತನಿಂದ ನೀನು ಬೇಡಿಕೊಂಡ ನಿನ್ನ ವಿಜ್ಞಾಪನೆಯನ್ನು ನಿನಗೆ ಕೊಡಲಿ ಅಂದನು.

೧ ಸಮುವೇಲನು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी