ಹಾಗಾದರೆ ಇವುಗಳು ಹೀಗೆ ಆಗಬೇಕೆಂಬ ಬರಹಗಳು ನೆರವೇರು ವದು ಹೇಗೆ ಅಂದನು.
52ಆಗ ಯೇಸು ಅವನಿಗೆ--ನಿನ್ನ ಕತ್ತಿಯನ್ನು ತಿರಿಗಿ ಅದರ ಒರೆಯಲ್ಲಿ ಸೇರಿಸು; ಯಾಕಂದರೆ ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ನಾಶವಾಗುವರು.
53ನಾನು ಈಗ ನನ್ನ ತಂದೆಗೆ ಪ್ರಾರ್ಥಿಸಲಾರನೆಂದೂ ಆತನು ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚಾದ ದೂತರನ್ನು ನನಗೆ ಕೊಡ ಲಾರನೆಂದೂ ನೀನು ನೆನಸುತ್ತಿಯೋ?
54ಹಾಗಾದರೆ ಇವುಗಳು ಹೀಗೆ ಆಗಬೇಕೆಂಬ ಬರಹಗಳು ನೆರವೇರು ವದು ಹೇಗೆ ಅಂದನು.
55ಅದೇ ಗಳಿಗೆಯಲ್ಲಿ ಯೇಸು ಜನಸಮೂಹಗಳಿಗೆ--ಒಬ್ಬ ಕಳ್ಳನಿಗೆ ವಿರೋಧವಾಗಿ ಬರುವಂತೆ ಕತ್ತಿಗಳೊಂದಿಗೂ ದೊಣ್ಣೆಗಳೊಂದಿಗೂ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ? ನಾನು ದಿನಾ ಲು ನಿಮ್ಮ ಸಂಗಡ ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;
56ಆದರೆ ಪ್ರವಾದಿಗಳ ಬರಹಗಳು ನೆರವೇರುವಂತೆ ಇದೆಲ್ಲಾ ಆಯಿತು ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ