ಅವನು ಆಳಲಾರಂಭಿಸಿದಾಗ ಮೂವತ್ತೆರಡು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಎಂಟು ವರುಷ ಆಳಿದನು.
15ಅವನು ದಪ್ಪ ಬಟ್ಟೆ ಯನ್ನು ತಕ್ಕೊಂಡು ನೀರಿನಲ್ಲಿ ಅದ್ದಿ ಅವನ ಮುಖದ ಮೇಲೆ ಹಾಕಿದ್ದರಿಂದ ಅವನು ಸತ್ತನು. ಹೀಗೆ ಹಜಾ ಯೇಲನು ಅವನಿಗೆ ಬದಲಾಗಿ ಅರಸನಾದನು.
16ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗನಾದ ಯೋರಾಮನ ಆಳ್ವಿಕೆಯ ಐದನೇ ವರುಷ ದಲ್ಲಿ ಯೆಹೂದದ ಅರಸನಾಗಿರುವ ಯೆಹೋಷಾಫಾ ಟನ ಮಗನಾದ ಯೆಹೋರಾಮನು ಆಳಲಾರಂಭಿಸಿ ದನು.
17ಅವನು ಆಳಲಾರಂಭಿಸಿದಾಗ ಮೂವತ್ತೆರಡು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಎಂಟು ವರುಷ ಆಳಿದನು.
18ಅಹಾಬನ ಮನೆಯವರು ಮಾಡಿದ ಹಾಗೆ ಅವನು ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದನು; ಯಾಕಂದರೆ ಅಹಾಬನ ಮಗಳು ಅವನಿಗೆ ಹೆಂಡತಿಯಾಗಿದ್ದಳು.
19ಕರ್ತನು ದಾವೀದನಿಗೂ ಅವನ ಮಕ್ಕಳಿಗೂ ನಿರಂತರವಾಗಿ ದೀಪವನ್ನು ಕೊಡುವೆನೆಂದು ಅವನಿಗೆ ವಾಗ್ದಾನ ಮಾಡಿದ ಹಾಗೆ ತನ್ನ ಸೇವಕನಾದ ದಾವೀದನ ನಿಮಿತ್ತ ಯೆಹೂದವನ್ನು ಕೆಡಿಸಲು ಮನಸ್ಸಿಲ್ಲದೆ ಇದ್ದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ