೧ ಪೇತ್ರನು 3:19

ಆತನು ಆತ್ಮನಿಂದಲೇ ಸೆರೆಯಲ್ಲಿದ್ದ ಆತ್ಮಗಳಿಗೆ ಹೋಗಿ ಸಾರಿದನು;

ಸಂದರ್ಭದೊಂದಿಗೆ ಓದಿ · ೧ ಪೇತ್ರನು 3

17ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವದಕ್ಕಿಂತ ಒಳ್ಳೇನಡತೆಯುಳ್ಳವರಾಗಿಯೇ ದೇವರ ಚಿತ್ತವಿದ್ದರೆ ಬಾಧೆಪಡುವದು ಲೇಸು.

18ಕ್ರಿಸ್ತನು ಸಹ ನೀತಿವಂತ ನಾಗಿದ್ದು ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವದಕ್ಕಾಗಿ ಪಾಪನಿವಾರಣೆಗೋಸ್ಕರ ಒಂದೇ ಸಾರಿ ಬಾಧೆಪಟ್ಟು ಶರೀರದಲ್ಲಿ ಕೊಲ್ಲಲ್ಪಟ್ಟನು, ಆತ್ಮನಿಂದ ಬದುಕುವವನಾದನು.

19ಆತನು ಆತ್ಮನಿಂದಲೇ ಸೆರೆಯಲ್ಲಿದ್ದ ಆತ್ಮಗಳಿಗೆ ಹೋಗಿ ಸಾರಿದನು;

20ಆದರೆ ನೋಹನ ದಿನಗಳಲ್ಲಿ ನಾವೆಯನ್ನು ಕಟ್ಟುತ್ತಿರಲು ದೇವರ ದೀರ್ಘಶಾಂತಿಯು ಒಂದು ಸಾರಿ ಕಾದಿದ್ದಾಗ ಆತನಿಗೆ ಅವಿಧೇಯರಾ ಗಿದ್ದವರ ಬಳಿಗೆ ಹೋಗಿ ಆತನು ಸಾರಿದನು. ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ನೀರಿನ ಮೂಲಕ ರಕ್ಷಣೆ ಹೊಂದಿದರು.

21ಆ ನೀರಿಗೆ ಅನುರೂಪವಾದ ಬಾಪ್ತಿಸ್ಮವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; (ಅದು ಮೈಕೊಳೆಯನ್ನು ಹೋಗಲಾಡಿ ಸುವಂಥದ್ದಲ್ಲ. ಆದರೆ ದೇವರ ಕಡೆಗಿರುವ ನಮ್ಮ ಒಳ್ಳೇ ಮನಸ್ಸಾಕ್ಷಿಯ ಉತ್ತರವಾಗಿದೆ).

೧ ಪೇತ್ರನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी