ಅಪೊಸ್ತಲರ ಕೃತ್ಯಗಳು 23:3

ಆಗ ಪೌಲನು ಅವನಿಗೆ--ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು; ನ್ಯಾಯಪ್ರಮಾಣ ಕ್ಕನುಸಾರವಾಗಿ ನನ್ನನ್ನು ತೀರ್ಪು ಮಾಡುವದಕ್ಕೆ ಕೂತುಕೊಂಡು ನ್ಯಾಯಪ್ರಮಾಣಕ್ಕೆ ಪ್ರತಿಕೂಲವಾಗಿ ನನ್ನನ್ನು ಹೊಡೆಯುವಂತೆ ನೀನು ಅಪ್ಪಣೆ ಕೊಡು ತ್ತೀಯೋ ಎಂದು ಕೇಳಿದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 23

1ಆಗ ಪೌಲನು ಆಲೋಚನಾ ಸಭೆಯನ್ನು ದೃಷ್ಟಿಸಿ ನೋಡುತ್ತಾ--ಜನರೇ, ಸಹೋ ದರರೇ, ನಾನು ಈ ದಿನದ ವರೆಗೆ ದೇವರ ಮುಂದೆ ಒಳ್ಳೇಮನಸ್ಸಾಕ್ಷಿಯಿಂದ ಜೀವಿಸಿದ್ದೇನೆ ಎಂದು ಹೇಳಿದನು.

2ಅದಕ್ಕೆ ಮಹಾಯಾಜಕನಾದ ಅನನೀಯ ನು ಅವನ ಬಾಯಿಯ ಮೇಲೆ ಹೊಡೆಯಬೇಕೆಂದು ತನ್ನ ಹತ್ತಿರ ನಿಂತಿದ್ದವರಿಗೆ ಅಪ್ಪಣೆಕೊಟ್ಟನು.

3ಆಗ ಪೌಲನು ಅವನಿಗೆ--ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು; ನ್ಯಾಯಪ್ರಮಾಣ ಕ್ಕನುಸಾರವಾಗಿ ನನ್ನನ್ನು ತೀರ್ಪು ಮಾಡುವದಕ್ಕೆ ಕೂತುಕೊಂಡು ನ್ಯಾಯಪ್ರಮಾಣಕ್ಕೆ ಪ್ರತಿಕೂಲವಾಗಿ ನನ್ನನ್ನು ಹೊಡೆಯುವಂತೆ ನೀನು ಅಪ್ಪಣೆ ಕೊಡು ತ್ತೀಯೋ ಎಂದು ಕೇಳಿದನು.

4ಹತ್ತಿರ ನಿಂತಿದ್ದವರು ದೇವರ ಮಹಾಯಾಜಕನನ್ನು ನೀನು ದೂಷಿಸುತ್ತೀಯೋ ಎಂದು ಕೇಳಿದರು.

5ಆಗ ಪೌಲನು--ಸಹೋದರರೇ, ಅವನು ಮಹಾಯಾಜಕನೆಂದು ನನಗೆ ತಿಳಿಯ ಲಿಲ್ಲ; --ನಿನ್ನ ಜನರ ಅಧಿಪತಿಯ ವಿಷಯವಾಗಿ ನೀನು ಕೆಟ್ಟದ್ದನ್ನು ಮಾತನಾಡಬಾರದು ಎಂಬದಾಗಿ ಬರೆದದೆ ಎಂದು ಹೇಳಿದನು.

ಅಪೊಸ್ತಲರ ಕೃತ್ಯಗಳು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी