ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಯಿತು. ಹೇಗಂದರೆ--
6ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
7ಓ ಮಹಾ ಬೆಟ್ಟವೇ, ನೀನ್ಯಾರು? ಜೆರುಬ್ಬಾಬೆಲನ ಮುಂದೆ ಬೈಲಾಗುವಿ; ಅದಕ್ಕೆ--ಕೃಪೆಯೇ, ಕೃಪೆಯೇ ಎಂದು ಅರ್ಭಟಗಳ ಸಂಗಡ ಮುಖ್ಯ ಕಲ್ಲನ್ನು ಅವನು ಹೊರಗೆ ತರುವನು.
8ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಯಿತು. ಹೇಗಂದರೆ--
9ಜೆರುಬ್ಬಾಬೆಲನ ಕೈಗಳು ಈ ಮನೆಯ ಅಸ್ತಿವಾರವನ್ನು ಹಾಕಿವೆ, ಅವನ ಕೈಗಳು ಸಹ ಅದನ್ನು ಪೂರೈಸುವವು; ಸೈನ್ಯಗಳ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ತಿಳಿಯುವಿರಿ.
10ಸಣ್ಣ ಕಾರ್ಯಗಳ ದಿನವನ್ನು ತಿರಸ್ಕರಿಸಿದವನ್ಯಾರು? ಆ ಏಳು ಅಂದರೆ ಭೂಮಿಯಲ್ಲೆಲ್ಲಾ ಅತ್ತಿತ್ತ ಓಡಾಡುವ ಕರ್ತನ ಕಣ್ಣುಗಳು ನೂಲು ಗುಂಡನ್ನು ಜೆರುಬ್ಬಾಬೆಲನ ಕೈಯಲ್ಲಿ ನೋಡುವಾಗ ಸಂತೋಷಪಡುತ್ತವೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ