ಹಗ್ಗಾಯ 1:4

ಈ ಮನೆ ಹಾಳಾಗಿರಲಾಗಿ ನೀವು ನಿಮ್ಮ ಚಿತ್ರ ಹಲಗೆಗಳುಳ್ಳ ಮನೆಗಳಲ್ಲಿ ವಾಸಮಾಡುವದಕ್ಕೆ ಇದು ನಿಮಗೆ ಸಮಯವೋ?

ಸಂದರ್ಭದೊಂದಿಗೆ ಓದಿ · ಹಗ್ಗಾಯ 1

2ಸೈನ್ಯಗಳ ಕರ್ತನು ಮಾತನಾಡಿ ಹೀಗೆ ಹೇಳುತ್ತಾನೆ, ಏನಂದರೆ--ಕಾಲವು ಅಂದರೆ ಕರ್ತನ ಆಲಯವನ್ನು ಕಟ್ಟುವ ಕಾಲವು ಬರಲಿಲ್ಲ ಎಂದು ಈ ಜನರು ಅನ್ನು ತ್ತಾರೆ.

3ಆಗ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಉಂಟಾಯಿತು. ಏನಂದರೆ--

4ಈ ಮನೆ ಹಾಳಾಗಿರಲಾಗಿ ನೀವು ನಿಮ್ಮ ಚಿತ್ರ ಹಲಗೆಗಳುಳ್ಳ ಮನೆಗಳಲ್ಲಿ ವಾಸಮಾಡುವದಕ್ಕೆ ಇದು ನಿಮಗೆ ಸಮಯವೋ?

5ಆದದರಿಂದ ಈಗ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ.

6ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ.

ಹಗ್ಗಾಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी