ವಿಮೋಚನಕಾಂಡ 39:7

ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಅವುಗಳನ್ನು ಎಫೋದಿನ ಹೆಗಲಿನ ಭಾಗಗಳ ಮೇಲೆ ಇಸ್ರಾ ಯೇಲ್ಯರ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಿರ ತಕ್ಕದ್ದೆಂದು ಅವುಗಳನ್ನು ಇಟ್ಟನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 39

5ಅದರ ಮೇಲಿರುವ ವಿಚಿತ್ರವಾದ ಎಫೋದಿನ ನಡು ಕಟ್ಟು ಅದೇ ಕೆಲಸಕ್ಕನುಸಾರವಾಗಿ ಚಿನ್ನ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳುಳ್ಳದ್ದಾಗಿದ್ದು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇತ್ತು.

6ಗೋಮೇಧಕ ಕಲ್ಲುಗಳನ್ನು ಮುದ್ರೆಯನ್ನು ಕೆತ್ತು ವಂತೆ ಬಂಗಾರದಲ್ಲಿ ಕೆತ್ತಲ್ಪಟ್ಟವುಗಳಾಗಿ ಇಸ್ರಾಯೇಲಿನ ಮಕ್ಕಳ ಹೆಸರುಗಳ ಪ್ರಕಾರ ಮಾಡಿದರು.

7ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಅವುಗಳನ್ನು ಎಫೋದಿನ ಹೆಗಲಿನ ಭಾಗಗಳ ಮೇಲೆ ಇಸ್ರಾ ಯೇಲ್ಯರ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಿರ ತಕ್ಕದ್ದೆಂದು ಅವುಗಳನ್ನು ಇಟ್ಟನು.

8ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಫೋದಿನ ಕೆಲಸದ ಹಾಗೆಯೇ ಬಂಗಾರ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳಿಂದ ಮಾಡಿದರು.

9ಅದು ಚಚ್ಚೌಕವಾಗಿತ್ತು; ಎದೆಪದಕವನ್ನು ಇಮ್ಮಡಿ ಸಿದ್ದಾಗಿ ಮಾಡಿದರು. ಅದು ಗೇಣುದ್ದವಾಗಿಯೂ ಗೇಣಗಲವಾಗಿಯೂ ಇಮ್ಮಡಿಸಿದ್ದಾಗಿತ್ತು.

ವಿಮೋಚನಕಾಂಡ 39 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी