೧ ಸಮುವೇಲನು 6:10

ಆ ಮನುಷ್ಯರು ಆ ಪ್ರಕಾರವೇ ಎರಡು ಕರೆ ಯುವ ಹಸುಗಳನ್ನು ತಕ್ಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಮನೆಯಲ್ಲಿಟ್ಟು

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 6

8ಕರ್ತನ ಮಂಜೂಷವನ್ನು ತೆಗೆದು, ಬಂಡಿಯ ಮೇಲೆ ಇಟ್ಟು ನೀವು ಕಳುಹಿಸಿ ಕೊಡುವ ನಿಮ್ಮ ಅಪರಾಧ ಕಾಣಿಕೆಯಾದ ಬಂಗಾರದ ಆಭರಣಗಳನ್ನು ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಹಾಕಿ ಕಳುಹಿಸಿರಿ; ಆಗ ನೋಡಿರಿ.

9ಅದು ತನ್ನ ಮೇರೆಯಾದ ಬೇತ್ಷೆಮೆಷಿನ ಮಾರ್ಗವನ್ನು ಹಿಡಿದು ಹೋದರೆ ಆತನು ಈ ದೊಡ್ಡ ಕೇಡನ್ನು ನಮಗೆ ಮಾಡಿದ್ದಾನೆ; ಇಲ್ಲದೆ ಹೋದರೆ ಆತನ ಹಸ್ತವು ನಮ್ಮನ್ನು ಮುಟ್ಟಲಿಲ್ಲ; ಅದು ನಮಗೆ ಪ್ರಾಪ್ತಿಯಾಯಿತೆಂದು ತಿಳುಕೊಳ್ಳಿರಿ ಅಂದರು.

10ಆ ಮನುಷ್ಯರು ಆ ಪ್ರಕಾರವೇ ಎರಡು ಕರೆ ಯುವ ಹಸುಗಳನ್ನು ತಕ್ಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಮನೆಯಲ್ಲಿಟ್ಟು

11ಕರ್ತನ ಮಂಜೂಷವನ್ನೂ ಬಂಗಾರದ ಇಲಿಗಳನ್ನೂ ತಮ್ಮ ಗಡ್ಡೆವ್ಯಾಧಿಯ ರೂಪಗಳನ್ನೂ ಹಿಡಿಯುವ ಚಿಕ್ಕ ಪೆಟ್ಟಿಗೆ ಯನ್ನೂ ಆ ಬಂಡಿಯ ಮೇಲಿಟ್ಟರು.

12ಆಗ ಹಸುಗಳು ಕೂಗುತ್ತಾ ಬೇತ್ಷೆಮೆಷಿಗೆ ಹೋಗುವ ಮಾರ್ಗವನ್ನು ಹಿಡಿದು ಬಲಕ್ಕೆ ಎಡಕ್ಕೆ ತಿರುಗದೆ ಹೆದ್ದಾರಿಯಲ್ಲಿ ಹೋದವು; ಫಿಲಿಷ್ಟಿಯರ ಅಧಿಪತಿಗಳು ಬೇತ್ಷೆಮೆಷಿನ ಮೇರೆಯವರೆಗೂ ಅವುಗಳ ಹಿಂದೆ ಹೋದರು.

೧ ಸಮುವೇಲನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी