೨ ಪೂರ್ವಕಾಲವೃತ್ತಾಂತ 24:22

ಹಾಗೆಯೇ ಇವನ ತಂದೆಯಾದ ಯೆಹೋಯಾದನು ತನಗೆ ತೋರಿಸಿದ ಕೃಪೆಯನ್ನು ಜ್ಞಾಪಕಮಾಡದೆ ಅರಸನಾದ ಯೆಹೋವಾಷನು ಅವನ ಮಗನನ್ನು ಕೊಂದುಹಾಕಿದನು. ಇವನು ಸಾಯುವಾಗ--ಕರ್ತನು ನೋಡಿ ವಿಚಾರಿಸಲಿ ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 24

20ಆಗ ದೇವರ ಆತ್ಮನು ಯಾಜಕನಾಗಿ ರುವ ಯೆಹೋಯಾದನ ಮಗನಾದ ಜೆಕರ್ಯನ ಮೇಲೆ ಬಂದನು. ಅವನು ಜನರೊಳಗೆ ಎತ್ತರವಾದ ಸ್ಥಳದಲ್ಲಿ ನಿಂತು ಅವರಿಗೆ--ನೀವು ವೃದ್ಧಿಹೊಂದ ಕೂಡದ ಹಾಗೆ ಕರ್ತನ ಆಜ್ಞೆಗಳನ್ನು ವಿಾರುವದೇನು? ನೀವು ಕರ್ತನನ್ನು ಬಿಟ್ಟದ್ದರಿಂದ ಆತನು ನಿಮ್ಮನ್ನು ಬಿಟ್ಟಿದ್ದಾನೆಂದು ಕರ್ತನು ಹೇಳುತ್ತಾನೆ ಅಂದನು.

21ಆದದರಿಂದ ಅವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಕರ್ತನ ಆಲಯದ ಅಂಗಳದಲ್ಲಿ ಅರಸನ ಅಪ್ಪಣೆಯಂತೆ ಅವನನ್ನು ಕಲ್ಲೆಸೆದು ಕೊಂದರು.

22ಹಾಗೆಯೇ ಇವನ ತಂದೆಯಾದ ಯೆಹೋಯಾದನು ತನಗೆ ತೋರಿಸಿದ ಕೃಪೆಯನ್ನು ಜ್ಞಾಪಕಮಾಡದೆ ಅರಸನಾದ ಯೆಹೋವಾಷನು ಅವನ ಮಗನನ್ನು ಕೊಂದುಹಾಕಿದನು. ಇವನು ಸಾಯುವಾಗ--ಕರ್ತನು ನೋಡಿ ವಿಚಾರಿಸಲಿ ಎಂದು ಹೇಳಿದನು.

23ವರುಷಾಂತ್ಯದಲ್ಲಿ ಏನಾಯಿತಂದರೆ, ಅರಾಮಿನ ಸೈನ್ಯದವರು ಅವನಿಗೆ ವಿರೋಧವಾಗಿ ಹೊರಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದು ಜನರ ಪ್ರಧಾನರನ್ನು ಅವರೊಳಗಿಂದ ನಾಶಮಾಡಿ ಅವರಿಂದ ತೆಗೆದುಕೊಂಡ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು.

24ಅವರು ತಮ್ಮ ಪಿತೃಗಳ ದೇವರಾದ ಕರ್ತನನ್ನು ಬಿಟ್ಟದ್ದರಿಂದ ಅರಾಮ್ಯರು ಅಲ್ಪಜನವಾದ ಸೈನ್ಯದ ಸಂಗಡ ಬಂದಾಗ ಕರ್ತನು ಬಹು ಅಧಿಕ ವಾದ ಸೈನ್ಯವನ್ನು ಅವರ ಕೈಯಲ್ಲಿ ಒಪ್ಪಿಸಿದನು. ಹೀಗೆ ಅವರು ಯೆಹೋವಾಷನಿಗೆ ವಿರೋಧವಾಗಿ ನ್ಯಾಯ ತೀರ್ವಿಕೆ ಮಾಡಿದರು. ಅವನು ಕಠಿಣ ರೋಗದಲ್ಲಿ ಬಿದ್ದಿರುವಾಗ ಅವನನ್ನು ಬಿಟ್ಟುಹೋದರು.

೨ ಪೂರ್ವಕಾಲವೃತ್ತಾಂತ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी