ಆದರೆ ಬೆಲಿಯಾಳನ ಮಕ್ಕಳೆಲ್ಲರೂ ತಳ್ಳಲ್ಪಡುವ ಮುಳ್ಳುಗಳ ಹಾಗೆ ಇರುವರು.
4ಸೂರ್ಯನು ಮೂಡಿರುವಂಥ, ಪ್ರಕಾಶದಿಂದ ಮೋಡಗಳಿಲ್ಲದೆ ಇರುವಂಥ, ಉದಯ ಕಾಲದ ಬೆಳಕಿನ ಹಾಗೆಯೂ ಮಳೆ ಬಂದ ಮೇಲೆ ಭೂಮಿಯಿಂದಾಗುವ ಹುಲ್ಲಿನ ಹಾಗೆಯೂ ಇರು ವನು.
5ನನ್ನ ಮನೆ ದೇವರ ಸಮ್ಮುಖದಲ್ಲಿ ಹಾಗೆಯೇ ಅಲ್ಲದಿದ್ದರೂ ನನ್ನ ಸಂಗಡ ನಿತ್ಯವಾದ ಒಡಂಬಡಿಕೆ ಯನ್ನು ಮಾಡಿದ್ದಾನೆ; ಎಲ್ಲಾದರ ವಿಷಯ ಸಿದ್ಧವಾದ ದ್ದಾಗಿಯೂ ಸ್ಥಿರವಾದದ್ದಾಗಿಯೂ ಅದೆ. ಆತನು ಅದನ್ನು ಬೆಳೆಯದೆ ಇದ್ದರೂ ನನ್ನ ಎಲ್ಲಾ ರಕ್ಷಣೆಯೂ ನನ್ನ ಎಲ್ಲಾ ಅಭಿಲಾಷೆಯೂ ಅದೇ.
6ಆದರೆ ಬೆಲಿಯಾಳನ ಮಕ್ಕಳೆಲ್ಲರೂ ತಳ್ಳಲ್ಪಡುವ ಮುಳ್ಳುಗಳ ಹಾಗೆ ಇರುವರು.
7ಅವರು ಕೈಯಿಂದ ತೆಗೆಯಲ್ಪಡುವ ವರಲ್ಲ; ಅವರನ್ನು ಮುಟ್ಟುವ ಮನುಷ್ಯನು ಕಬ್ಬಿಣ ವನ್ನೂ ಈಟಿಯ ಕಟ್ಟಿಗೆಯನ್ನೂ ಧರಿಸಿಕೊಂಡಿರ ಬೇಕು. ಅದೇ ಸ್ಥಳದಲ್ಲಿ ಬೆಂಕಿಯಿಂದ ಸುಟ್ಟು ಬಿಡಲ್ಪಡುವರು.
8ದಾವೀದನಿಗೆ ಇದ್ದ ಪರಾಕ್ರಮಶಾಲಿಗಳ ಹೆಸರು ಗಳು ಇವೇ; ಸೈನ್ಯಾಧಿಪತಿಗಳಲ್ಲಿ ಮುಖ್ಯನಾಗಿ ಆಸನದ ಮೇಲೆ ಕೂತವನಾದ ತಹ್ಕೆಮೋನ್ಯನು; ಇವನೇ ಎಚ್ನಿಯನಾದ ಅದೀನೊ. ಇವನು ಎಂಟು ನೂರು ಜನರ ಮೇಲೆ ಬಿದ್ದು ಅವರನ್ನು ಒಂದೇ ಸಾರಿ ಕೊಂದು ಹಾಕಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ