ರೋಮಾಪುರದವರಿಗೆ 1:9

ನಾನು ಯಾವಾಗಲೂ ಪ್ರಾರ್ಥನೆಗಳಲ್ಲಿ ಎಡೆಬಿಡದೆ ನಿಮ್ಮನ್ನು ಜ್ಞಾಪಕ ಮಾಡಿ ಕೊಳ್ಳುತ್ತೇನೆ. ನಾನು ಯಾವಾತನ ಮಗನ ಸುವಾರ್ತೆ ಯಲ್ಲಿ ನನ್ನ ಆತ್ಮದೊಂದಿಗೆ ಸೇವಿಸುತ್ತೇನೋ ಆ ದೇವರೇ ಇದಕ್ಕೆ ನನ್ನ ಸಾಕ್ಷಿ.

ಸಂದರ್ಭದೊಂದಿಗೆ ಓದಿ · ರೋಮಾಪುರದವರಿಗೆ 1

7ಇದಲ್ಲದೆ ದೇವರಿಗೆ ಪ್ರಿಯ ರಾಗಿದ್ದು ಪರಿಶುದ್ಧರಾಗುವದಕ್ಕೆ ಕರೆಯಲ್ಪಟ್ಟ ರೋಮ್‌ ನಲ್ಲಿರುವವರೆಲ್ಲರಿಗೆ ನಮ್ಮ ತಂದೆಯಾದ ದೇವ ರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಉಂಟಾಗಲಿ.

8ಮೊದಲನೆಯದಾಗಿ ನಿಮ್ಮ ನಂಬಿಕೆಯು ಲೋಕ ದಲ್ಲೆಲ್ಲಾ ಪ್ರಸಿದ್ಧವಾದದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮುಖಾಂತರ ನಾನು ನನ್ನ ದೇವರಿಗೆ ಸ್ತೋತ್ರಸಲ್ಲಿಸುತ್ತೇನೆ.

9ನಾನು ಯಾವಾಗಲೂ ಪ್ರಾರ್ಥನೆಗಳಲ್ಲಿ ಎಡೆಬಿಡದೆ ನಿಮ್ಮನ್ನು ಜ್ಞಾಪಕ ಮಾಡಿ ಕೊಳ್ಳುತ್ತೇನೆ. ನಾನು ಯಾವಾತನ ಮಗನ ಸುವಾರ್ತೆ ಯಲ್ಲಿ ನನ್ನ ಆತ್ಮದೊಂದಿಗೆ ಸೇವಿಸುತ್ತೇನೋ ಆ ದೇವರೇ ಇದಕ್ಕೆ ನನ್ನ ಸಾಕ್ಷಿ.

10ಕೊನೆಯದಾಗಿ ನಾನು ನಿಮ್ಮ ಬಳಿಗೆ ಹೇಗಾದರೂ ಬರುವದಕ್ಕೆ ದೇವರ ಚಿತ್ತದಿಂದ ನನ್ನ ಪ್ರಯಾಣವು ಸಫಲವಾಗುವಂತೆ ಬೇಡಿಕೊಳ್ಳುತ್ತೇನೆ.

11ನೀವು ಸ್ಥಿರಗೊಳ್ಳುವಂತೆ ನನ್ನ ಮುಖಾಂತರ ನಿಮಗೆ ಯಾವದಾದರೂ ಆತ್ಮೀಕದಾನ ದೊರೆಯಲಿ ಎಂದು ನಾನು ನಿಮ್ಮನ್ನು ನೋಡಲು ಹಂಬಲಿಸುತ್ತೇನೆ.

ರೋಮಾಪುರದವರಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी