ಈ ಪಟ್ಟಣವು ಅದು ಕಟ್ಟಲ್ಪಟ್ಟ ದಿನವು ಮೊದಲುಗೊಂಡು ಈ ದಿನದ ವರೆಗೂ ನನ್ನ ಕೋಪಕ್ಕೂ ಉಗ್ರಕ್ಕೂ ಗುರಿಯಾಗಿತ್ತು.
29ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡುವ ಕಸ್ದೀಯರು ಬಂದು ಈ ಪಟ್ಟಣಕ್ಕೆ ಬೆಂಕಿ ಹಚ್ಚಿ ಅದನ್ನೂ ಮತ್ತು ಯಾವ ಮನೆಗಳ ಮಾಳಿಗೆಗಳ ಮೇಲೆ ಬಾಳನಿಗೆ ಧೂಪವರ್ಪಿಸಿ ನನಗೆ ಕೋಪದ್ರೇಕ ಎಬ್ಬಿಸುವ ಹಾಗೆ ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯಿ ದಿದ್ದಾರೋ ಅವುಗಳನ್ನು ಸುಟ್ಟುಬಿಡುವರು.
30ಇಸ್ರಾ ಯೇಲಿನ ಮಕ್ಕಳೂ ಯೆಹೂದದ ಮಕ್ಕಳೂ ತಮ್ಮ ಯೌವನದಾರಭ್ಯ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದ್ದಾರೆ; ಇಸ್ರಾಯೇಲಿನ ಮಕ್ಕಳು ತಮ್ಮ ಕೈ ಕೆಲಸಗಳಿಂದ ನನಗೆ ಕೋಪೋದ್ರೇಕವನ್ನೇ ಎಬ್ಬಿಸಿದ್ದಾರೆ ಎಂದು ಕರ್ತನು ಅನ್ನುತ್ತಾನೆ.
31ಈ ಪಟ್ಟಣವು ಅದು ಕಟ್ಟಲ್ಪಟ್ಟ ದಿನವು ಮೊದಲುಗೊಂಡು ಈ ದಿನದ ವರೆಗೂ ನನ್ನ ಕೋಪಕ್ಕೂ ಉಗ್ರಕ್ಕೂ ಗುರಿಯಾಗಿತ್ತು.
32ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಅವರ ಅರಸರೂ ಪ್ರಧಾನರೂ ಯಾಜಕರೂ ಪ್ರವಾದಿ ಗಳೂ ಯೆಹೂದದ ಜನರೂ ಯೆರೂಸಲೇಮಿನ ನಿವಾಸಿಗಳೂ ಸಹಿತವಾಗಿ ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ನಾನು ಆ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು.
33ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ನಾನು ಅವರಿಗೆ ಬೋಧಿಸಿದೆನು. ಬೆಳಿಗ್ಗೆ ಎದ್ದು ಬೋಧಿಸಿದೆನು, ಆದಾಗ್ಯೂ ಉಪದೇಶ ಹೊಂದುವದಕ್ಕೆ ಅವರು ಕಿವಿ ಗೊಡಲಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ