ವಿಮೋಚನಕಾಂಡ 5:11

ನಿಮಗೆ ಹುಲ್ಲು ಎಲ್ಲಿ ದೊರಕುವದೋ ಅಲ್ಲಿಗೆ ನೀವೇ ಹೋಗಿ ತಕ್ಕೊಳ್ಳಿರಿ; ಆದಾಗ್ಯೂ ನಿಮ್ಮ ಕೆಲಸವು ಏನೂ ಕಡಿಮೆಯಾಗಬಾರದು ಎಂದು ಹೇಳಿ ದ್ದಾನೆ ಅಂದನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 5

9ಈ ಜನರು ವ್ಯರ್ಥವಾದ ಮಾತುಗಳಿಗೆ ಲಕ್ಷ್ಯಕೊಡದಂತೆ ಅವರ ಮೇಲೆ ಹೆಚ್ಚು ಕೆಲಸಗಳನ್ನು ಹೊರಿಸಿರಿ, ಅವರು ದುಡಿಯಲಿ ಎಂದು ಆಜ್ಞಾಪಿಸಿದನು.

10ಆಗ ಬಿಟ್ಟೀಕೆಲಸವನ್ನು ಮಾಡಿಸುವವರೂ ಅಧಿ ಕಾರಿಗಳೂ ಹೊರಗೆಹೋಗಿ ಜನರಿಗೆ--ಫರೋಹನು ಹೀಗೆ ಹೇಳುತ್ತಾನೆ--ನಾನು ನಿಮಗೆ ಹುಲ್ಲು ಕೊಡು ವದಿಲ್ಲ.

11ನಿಮಗೆ ಹುಲ್ಲು ಎಲ್ಲಿ ದೊರಕುವದೋ ಅಲ್ಲಿಗೆ ನೀವೇ ಹೋಗಿ ತಕ್ಕೊಳ್ಳಿರಿ; ಆದಾಗ್ಯೂ ನಿಮ್ಮ ಕೆಲಸವು ಏನೂ ಕಡಿಮೆಯಾಗಬಾರದು ಎಂದು ಹೇಳಿ ದ್ದಾನೆ ಅಂದನು.

12ಆಗ ಜನರು ಹುಲ್ಲಿಗೆ ಬದಲಾಗಿ ಕೂಳೆ ಕೂಡಿಸಿಕೊಳ್ಳುವದಕ್ಕೆ ಐಗುಪ್ತದೇಶದಲ್ಲೆಲ್ಲಾ ಚದರಿಹೋದರು.

13ಇದಲ್ಲದೆ ಬಿಟ್ಟೀಕೆಲಸ ಮಾಡಿಸು ವವರು--ಹುಲ್ಲು ಇದ್ದಾಗ ನಿಮ್ಮ ಕೆಲಸಗಳನ್ನು ಮಾಡಿ ದಂತೆಯೇ ಪ್ರತಿಯೊಂದು ದಿನದಲ್ಲಿ ಆ ದಿನದ ಕೆಲಸ ವನ್ನು ತೀರಿಸಿಬಿಡಬೇಕು ಎಂದು ಹೇಳಿ ಅವರನ್ನು ತ್ವರೆಪಡಿಸಿದರು.

ವಿಮೋಚನಕಾಂಡ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी