ಫರೋಹನು ಯಾಕೋಬನಿಗೆ--ನಿನಗೆ ಎಷ್ಟು ವರುಷಗಳು ಅಂದಾಗ
6ಐಗುಪ್ತದೇಶವು ನಿನ್ನ ಮುಂದೆ ಇದೆ. ದೇಶದ ಉತ್ತಮವಾದದ್ದರಲ್ಲಿ ನಿನ್ನ ತಂದೆಯೂ ಸಹೋದರರೂ ವಾಸಮಾಡುವಂತೆ ಮಾಡು. ಗೋಷೆನ್ ಸೀಮೆಯಲ್ಲಿ ಅವರು ವಾಸವಾ ಗಿರಲಿ. ಅವರಲ್ಲಿ ಚಟುವಟಿಕೆಯುಳ್ಳವರು ಇದ್ದಾರೆಂದು ನಿನಗೆ ತಿಳಿದರೆ ಅವರನ್ನು ನಮಗಿರುವ ಮಂದೆಗಳ ಮೇಲೆ ವಿಚಾರಕರನ್ನಾಗಿ ಇರಿಸು ಅಂದನು.
7ಯೋಸೇಫನು ತನ್ನ ತಂದೆಯಾದ ಯಾಕೋಬ ನನ್ನು ಕರಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು. ಯಾಕೋಬನು ಫರೋಹನನ್ನು ಆಶೀರ್ವ ದಿಸಿದನು.
8ಫರೋಹನು ಯಾಕೋಬನಿಗೆ--ನಿನಗೆ ಎಷ್ಟು ವರುಷಗಳು ಅಂದಾಗ
9ಯಾಕೋಬನು ಫರೋಹನಿಗೆ--ನನ್ನ ಪ್ರವಾಸದ ದಿನಗಳು ನೂರ ಮೂವತ್ತು ವರುಷಗಳು. ನನ್ನ ಜೀವನದ ದಿನಗಳು ಸ್ವಲ್ಪವಾಗಿಯೂ ದುಃಖಕರವಾಗಿಯೂ ಇದ್ದವು. ನನ್ನ ತಂದೆಗಳು ತಾವು ಪ್ರವಾಸಿಗಳಾಗಿದ್ದ ಜೀವನದ ವರುಷಗಳ ದಿನಗಳಿಗೆ ನಾನು ಮುಟ್ಟಲಿಲ್ಲ ಅಂದನು.
10ಆಗ ಯಾಕೋಬನು ಫರೋಹನನ್ನು ಆಶೀರ್ವದಿಸಿ ಅವನ ಸನ್ನಿಧಿಯಿಂದ ಹೊರಟುಹೋದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ