ಎಲೀಷನು ಅವನಿಗೆ--ಸಮಾ ಧಾನದಿಂದ ಹೋಗು ಅಂದನು. ಆಗ ಅವನನ್ನು ಬಿಟ್ಟು ಸ್ವಲ್ಪ ದೂರವಾಗಿ ಹೋದನು.
17ಆಗ ನಾಮಾನನುಹಾಗಾದರೆ ಎರಡು ಹೇಸರ ಕತ್ತೆಗಳು ಹೊರತಕ್ಕ ಮಣ್ಣು ನಿನ್ನ ಸೇವಕನಿಗೆ ದಯಮಾಡಬೇಕಲ್ಲಾ. ನಿನ್ನ ಸೇವಕನು ಇನ್ನು ಮೇಲೆ ಕರ್ತನಿಗೆ ಹೊರತಾಗಿ ಅನ್ಯದೇವರುಗಳಿಗೆ ದಹನಬಲಿಯನ್ನಾದರೂ ಬಲಿ ಯನ್ನಾದರೂ ಅರ್ಪಿಸನು.
18ಈ ಕಾರ್ಯವನ್ನು ಕರ್ತನು ನಿನ್ನ ಸೇವಕನಿಗೆ ಮನ್ನಿಸಲಿ; ಏನಂದರೆ, ನನ್ನ ಯಜಮಾನನು ಆರಾಧನೆಗೋಸ್ಕರ ರಿಮ್ಮೋನನ ಮನೆಯಲ್ಲಿ ಪ್ರವೇಶಿಸಿ ಅವನು ನನ್ನ ಕೈಯ ಮೇಲೆ ಆತುಕೊಳ್ಳುವಾಗ ರಿಮ್ಮೋನನ ಮನೆಯಲ್ಲಿ ನಾನು ಅಡ್ಡಬಿದ್ದರೆ ಕರ್ತನು ನಿನ್ನ ಸೇವಕನಿಗೆ ಈ ಕಾರ್ಯವನ್ನು ಮನ್ನಿಸಲಿ ಅಂದನು.
19ಎಲೀಷನು ಅವನಿಗೆ--ಸಮಾ ಧಾನದಿಂದ ಹೋಗು ಅಂದನು. ಆಗ ಅವನನ್ನು ಬಿಟ್ಟು ಸ್ವಲ್ಪ ದೂರವಾಗಿ ಹೋದನು.
20ಆದರೆ ದೇವರ ಮನುಷ್ಯನಾದ ಎಲೀಷನ ಸೇವಕ ನಾಗಿರುವ ಗೇಹಜಿಯು--ಇಗೋ, ನನ್ನ ಯಜಮಾ ನನು ಈ ಅರಾಮ್ಯನಾದ ನಾಮಾನನು ತಕ್ಕೊಂಡು ಬಂದದ್ದನ್ನು ಅವನ ಕೈಯಿಂದ ತಕ್ಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಕರ್ತನ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ ಅವನ ಕೈಯಿಂದ ಏನಾ ದರೂ ತಕ್ಕೊಳ್ಳುವೆನು ಅಂದುಕೊಂಡನು.
21ಹಾಗೆಯೇ ಗೇಹಜಿಯು ನಾಮಾನನ ಹಿಂದೆ ಹೋದನು. ನಾಮಾನನು ತನ್ನ ಹಿಂದೆ ಓಡಿ ಬರುವವನನ್ನು ನೋಡಿ ದಾಗ ಅವನನ್ನು ಎದುರುಗೊಳ್ಳಲು ರಥದಿಂದ ಇಳಿದು ಅವನಿಗೆ--ಎಲ್ಲಾ ಕ್ಷೇಮವೋ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ