೨ ಕೊರಿಂಥದವರಿಗೆ 7:4

ನಿಮ್ಮೊಂದಿಗೆ ಮಾತನಾಡು ವದಕ್ಕೆ ನನಗೆ ಬಹಳ ಧೈರ್ಯವೂ ನಿಮ್ಮ ವಿಷಯದಲ್ಲಿ ನನಗೆ ಬಹಳ ಹೆಚ್ಚಳವೂ ಉಂಟು; ನಾನು ಆದರಣೆ ಯಿಂದ ತುಂಬಿದವನಾಗಿ ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ಇದ್ದೇನೆ.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 7

2ನಮ್ಮನ್ನು ಸೇರಿಸಿಕೊಳ್ಳಿರಿ; ನಾವು ಯಾರಿಗೂ ಅನ್ಯಾಯಮಾಡಲಿಲ್ಲ. ಯಾರನ್ನೂ ಕೆಡಿಸಲಿಲ್ಲ, ಯಾರನ್ನೂ ವಂಚಿಸಲಿಲ್ಲ.

3ನಿಮ್ಮ ಮೇಲೆ ತಪ್ಪು ಹೊರಿಸಬೇಕೆಂದು ನಾನು ಇದನ್ನು ಹೇಳುವದಿಲ್ಲ; ಯಾಕಂದರೆ ನಿಮ್ಮೊಂದಿಗೆ ಸಾಯುವದಕ್ಕೂ ಬದುಕು ವದಕ್ಕೂ ನೀವು ನಮ್ಮ ಹೃದಯಗಳಲ್ಲಿದ್ದೀರೆಂದು ಮೊದಲೇ ಹೇಳಿದ್ದೇನೆ.

4ನಿಮ್ಮೊಂದಿಗೆ ಮಾತನಾಡು ವದಕ್ಕೆ ನನಗೆ ಬಹಳ ಧೈರ್ಯವೂ ನಿಮ್ಮ ವಿಷಯದಲ್ಲಿ ನನಗೆ ಬಹಳ ಹೆಚ್ಚಳವೂ ಉಂಟು; ನಾನು ಆದರಣೆ ಯಿಂದ ತುಂಬಿದವನಾಗಿ ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ಇದ್ದೇನೆ.

5ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಶರೀರಕ್ಕೆ ಏನೂ ವಿಶ್ರಾಂತಿಯಾಗಲಿಲ್ಲ; ಆದರೆ ಎಲ್ಲಾ ಕಡೆಯಲ್ಲಿಯೂ ನಮಗೆ ಕಳವಳವಿತ್ತು ಹೊರಗೆ ಕಲಹ; ಒಳಗೆ ಭಯವಿತ್ತು.

6ಆದಾಗ್ಯೂ ಕುಗ್ಗಿಹೋದ ವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು.

೨ ಕೊರಿಂಥದವರಿಗೆ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी