ಆದಿಕಾಂಡ 47:16

ಆಗ ಯೋಸೇಫ ನು--ನಿಮ್ಮ ದನಗಳನ್ನು ತಕ್ಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ ನಿಮ್ಮ ದನಗಳಿಗೆ ಬದಲಾಗಿ (ಧಾನ್ಯವನ್ನು) ಕೊಡುತ್ತೇನೆ ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 47

14ಆಗ ಯೋಸೇಫನು ಐಗುಪ್ತದೇಶದಲ್ಲಿಯೂ ಕಾನಾನ್‌ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ ಅದನ್ನು ಫರೋಹನ ಮನೆಗೆ ತಂದನು.

15ಐಗುಪ್ತ ದೇಶದಲ್ಲಿಯೂ ಕಾನಾನ್‌ದೇಶದಲ್ಲಿಯೂ ಹಣವು ಮುಗಿದಾಗ ಐಗುಪ್ತ್ಯರೆಲ್ಲರೂ ಯೋಸೇಫನ ಬಳಿಗೆ ಬಂದು--ನಮಗೆ ರೊಟ್ಟಿಯನ್ನು ಕೊಡು, ನಾವು ನಿನ್ನ ಮುಂದೆ ಯಾಕೆ ಸಾಯಬೇಕು? ಯಾಕಂದರೆ ಹಣವೆಲ್ಲಾ ತೀರಿತು ಅಂದರು.

16ಆಗ ಯೋಸೇಫ ನು--ನಿಮ್ಮ ದನಗಳನ್ನು ತಕ್ಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ ನಿಮ್ಮ ದನಗಳಿಗೆ ಬದಲಾಗಿ (ಧಾನ್ಯವನ್ನು) ಕೊಡುತ್ತೇನೆ ಅಂದನು.

17ಆಗ ಅವರು ತಮ್ಮ ಪಶುಗಳನ್ನು ಯೋಸೇಫನ ಬಳಿಗೆ ತಂದರು. ಯೋಸೇಫನು ಅವರ ಕುದುರೆ ಮಂದೆ ದನ ಕತ್ತೆ ಇವುಗಳ ಬದಲಾಗಿ ರೊಟ್ಟಿಯನ್ನು ಕೊಟ್ಟು. ಆ ವರುಷವೆಲ್ಲಾ ಅವರನ್ನು ಪೋಷಿಸಿದನು.

18ಆ ವರುಷವಾದ ಮೇಲೆ ಎರಡನೆಯ ವರುಷದಲ್ಲಿ ಅವರು ಅವನ ಬಳಿಗೆ ಬಂದು ಅವನಿಗೆ--ಹಣವೂ ಪಶುಗಳ ಮಂದೆಗಳೂ ನಮ್ಮ ಒಡೆಯನ ವಶವಾಗಿ ಮುಗಿದಿರುವದರಿಂದ ನಮ್ಮ ಶರೀರಗಳೂ ಭೂಮಿಗಳೂ ಹೊರತು ನಮ್ಮ ಒಡೆಯನ ಮುಂದೆ ಏನೂ ಉಳಿಯಲಿಲ್ಲವೆಂಬದನ್ನು ನಮ್ಮ ಒಡೆಯನಿಗೆ ಮರೆಮಾಡುವದಿಲ್ಲ.

ಆದಿಕಾಂಡ 47 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी