ಯೆರೆಮಿಯ 11:21

ಆದ ದರಿಂದ ನಿನ್ನ ಪ್ರಾಣವನ್ನು ಹುಡುಕುವ ಅನಾತೋತಿನ ಮನುಷ್ಯರಿಗೆ--ನೀನು ನಮ್ಮ ಕೈಯಿಂದ ಸಾಯದ ಹಾಗೆ ಕರ್ತನ ಹೆಸರಿನಲ್ಲಿ ಪ್ರವಾದನೆ ಹೇಳಬೇಡ ಎಂದು ಅನ್ನುವವರಿಗೆ ಕರ್ತನು ಹೇಳುವದೇನಂದರೆ--

ಸಂದರ್ಭದೊಂದಿಗೆ ಓದಿ · ಯೆರೆಮಿಯ 11

19ಆದರೆ ನಾನು ವಧೆಗೆ ತಕ್ಕೊಂಡು ಹೋಗುವ ಕುರಿಯಹಾಗೆ ಇಲ್ಲವೆ ಎತ್ತಿನ ಹಾಗೆ ಇದ್ದೆನು; ನನಗೆ ವಿರೋಧವಾಗಿ ಕಲ್ಪನೆಗಳನ್ನು ಕಲ್ಪಿಸು ತ್ತಾರೆಂದೂ ಮರವನ್ನೂ ಅದರ ಫಲವನ್ನೂ ಕೆಡಿಸಿ ಅವನ ಹೆಸರು ಇನ್ನು ಜ್ಞಾಪಕಮಾಡಲ್ಪಡದ ಹಾಗೆ ಜೀವಿತರ ದೇಶದೊಳಗಿಂದ ಅವನನ್ನು ಕಡಿದು ಬಿಡೋಣ ಎಂದು ಅಂದುಕೊಳ್ಳುತ್ತಾರೆಂದೂ ನನಗೆ ತಿಳಿಯಲಿಲ್ಲ.

20ಆದರೆ ನೀತಿಯಿಂದ ನ್ಯಾಯತೀರಿಸು ವಂಥ ಅಂತರಿಂದ್ರಿಯಗಳನ್ನೂ ಹೃದಯವನ್ನೂ ಶೋಧಿಸುವಂಥ ಸೈನ್ಯಗಳ ಕರ್ತನೇ, ನೀನು ಅವರಿಗೆ ಕೊಡುವ ಪ್ರತಿದಂಡನೆಯನ್ನು ನಾನು ಕಾಣುವೆನು. ನಿನಗೆ ನನ್ನ ವ್ಯಾಜ್ಯವನ್ನು ಪ್ರಕಟಮಾಡಿದ್ದೇನೆ.

21ಆದ ದರಿಂದ ನಿನ್ನ ಪ್ರಾಣವನ್ನು ಹುಡುಕುವ ಅನಾತೋತಿನ ಮನುಷ್ಯರಿಗೆ--ನೀನು ನಮ್ಮ ಕೈಯಿಂದ ಸಾಯದ ಹಾಗೆ ಕರ್ತನ ಹೆಸರಿನಲ್ಲಿ ಪ್ರವಾದನೆ ಹೇಳಬೇಡ ಎಂದು ಅನ್ನುವವರಿಗೆ ಕರ್ತನು ಹೇಳುವದೇನಂದರೆ--

22ಸೈನ್ಯ ಗಳ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಅವರನ್ನು ಶಿಕ್ಷಿಸುತ್ತೇನೆ, ಯೌವನಸ್ಥರು ಕತ್ತಿಯಿಂದ ಸಾಯುವರು; ಅವರ ಕುಮಾರ ಕುಮಾರ್ತೆಯರು ಹಸಿವೆಯಿಂದ ಸಾಯುವರು.

23ಅವರಲ್ಲಿ ಶೇಷವು ಇರುವದಿಲ್ಲ; ನಾನು ಅನಾತೋತಿನ ಮನುಷ್ಯರ ಮೇಲೆ ಕೇಡನ್ನು ಅಂದರೆ ಅವರ ವಿಚಾರಣೆಯ ವರುಷವನ್ನೇ ತರುತ್ತೇನೆ.

ಯೆರೆಮಿಯ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी