೧ ಅರಸುಗಳು 9:8

ಇಸ್ರಾಯೇಲು ಸಮಸ್ತ ಜನಗಳಲ್ಲಿ ಗಾದೆ ಯಾಗಿಯೂ ಅಪಹಾಸ್ಯವಾಗಿಯೂ ಇರುವದು. ಇದ ಲ್ಲದೆ ಈ ಎತ್ತರವಾಗಿರುವ ಮನೆಯನ್ನು ಹಾದುಹೋಗು ವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು--ಛೀ ಅಂದುಕರ್ತನು ಈ ದೇಶಕ್ಕೂ ಈ ಮಂದಿರಕ್ಕೂ ಹೀಗೆ ಯಾಕೆ ಮಾಡಿದನು ಎಂದು ಅನ್ನುವರು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 9

6ನೀವಾದರೂ ನಿಮ್ಮ ಮಕ್ಕಳಾದರೂ ನಾನು ನಿಮ್ಮ ಮುಂದೆ ಇಟ್ಟ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳದೆ ನನ್ನ ಕಡೆಯಿಂದ ಹೊರಟುಹೋಗಿ

7ಅನ್ಯ ದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಾನು ಆಗ ಇಸ್ರಾಯೇಲಿಗೆ ಕೊಟ್ಟ ಭೂಮಿಯಲ್ಲಿಂದ ಅವ ರನ್ನು ಕಡಿದುಬಿಟ್ಟು ನನ್ನ ಹೆಸರಿಗೋಸ್ಕರ ಪರಿಶುದ್ಧ ಮಾಡಿದ ಈ ಮಂದಿರವನ್ನು ನನ್ನ ಎದುರಿನಿಂದ ತೆಗೆದು ಬಿಡುವೆನು.

8ಇಸ್ರಾಯೇಲು ಸಮಸ್ತ ಜನಗಳಲ್ಲಿ ಗಾದೆ ಯಾಗಿಯೂ ಅಪಹಾಸ್ಯವಾಗಿಯೂ ಇರುವದು. ಇದ ಲ್ಲದೆ ಈ ಎತ್ತರವಾಗಿರುವ ಮನೆಯನ್ನು ಹಾದುಹೋಗು ವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು--ಛೀ ಅಂದುಕರ್ತನು ಈ ದೇಶಕ್ಕೂ ಈ ಮಂದಿರಕ್ಕೂ ಹೀಗೆ ಯಾಕೆ ಮಾಡಿದನು ಎಂದು ಅನ್ನುವರು.

9ಅವರು ಪ್ರತ್ಯುತ್ತರವಾಗಿ--ತಮ್ಮ ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ಬಿಟ್ಟು ಅನ್ಯದೇವರುಗಳನ್ನು ಹೊಂದಿಕೊಂಡು ಅವುಗಳಿಗೆ ಅಡ್ಬಬಿದ್ದು ಸೇವಿಸಿದ್ದರಿಂದ ಕರ್ತನು ಈ ಕೇಡನ್ನೆಲ್ಲಾ ನಮ್ಮ ಮೇಲೆ ಬರಮಾಡಿದನೆಂದು ಹೇಳು ವರು ಅಂದನು.

10ತೂರಿನ ಅರಸನಾದ ಹೀರಾಮನು ಸೊಲೊ ಮೋನನಿಗೆ ದೇವದಾರು ಮರಗಳನ್ನೂ ತುರಾಯಿ ಮರಗಳನ್ನೂ ಚಿನ್ನವನ್ನೂ ತನ್ನ ಎಲ್ಲಾ ಇಷ್ಟದ ಪ್ರಕಾರ ಕೊಟ್ಟಿದ್ದರಿಂದ

೧ ಅರಸುಗಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी