ಪ್ರಸಂಗಿ 2:3

ಜ್ಞಾನದಿಂದ ನನ್ನ ಹೃದಯವನ್ನು ಇನ್ನು ಸಂತೋಷಪಡಿಸುವದಕ್ಕಾಗಿ ದ್ರಾಕ್ಷಾರಸಕ್ಕೆ ನನ್ನನ್ನು ನಾನು ಒಪ್ಪಿಸಿ ಕೊಳ್ಳುವಂತೆಯೂ ಆಕಾಶದ ಕೆಳಗೆ ತಮ್ಮ ಜೀವ ಮಾನದಲ್ಲೆಲ್ಲಾ ಮನುಷ್ಯ ಪುತ್ರರಿಗೆ ಒಳ್ಳೆಯದೇನೆಂದು ನೋಡುವ ತನಕ ಬುದ್ಧಿ ಹೀನತೆಯನ್ನು ಹಿಡಿಯುವದಕ್ಕೂ ನಾನು ನನ್ನ ಹೃದಯ ದಲ್ಲಿ ವಿಚಾರ ಮಾಡಿಕೊಂಡೆನು.

ಸಂದರ್ಭದೊಂದಿಗೆ ಓದಿ · ಪ್ರಸಂಗಿ 2

1ನಾನು ನನ್ನ ಹೃದಯದಲ್ಲಿ--ಹೋಗು, ನಾನು ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಆದಕಾರಣ ಸುಖವನ್ನು ಅನುಭವಿಸು ಎಂದು ಅಂದುಕೊಂಡೆನು. ಇಗೋ, ಇದು ಕೂಡ ವ್ಯರ್ಥವೇ.

2ನಗೆಯ ವಿಷಯವಾಗಿ--ಇದು ಹುಚ್ಚು ಎಂದೂ ಸಂತೋಷದ ವಿಷಯವಾಗಿ--ಇದೇನು ಮಾಡುತ್ತದೆ ಎಂದೂ ನಾನು ಹೇಳಿದೆನು.

3ಜ್ಞಾನದಿಂದ ನನ್ನ ಹೃದಯವನ್ನು ಇನ್ನು ಸಂತೋಷಪಡಿಸುವದಕ್ಕಾಗಿ ದ್ರಾಕ್ಷಾರಸಕ್ಕೆ ನನ್ನನ್ನು ನಾನು ಒಪ್ಪಿಸಿ ಕೊಳ್ಳುವಂತೆಯೂ ಆಕಾಶದ ಕೆಳಗೆ ತಮ್ಮ ಜೀವ ಮಾನದಲ್ಲೆಲ್ಲಾ ಮನುಷ್ಯ ಪುತ್ರರಿಗೆ ಒಳ್ಳೆಯದೇನೆಂದು ನೋಡುವ ತನಕ ಬುದ್ಧಿ ಹೀನತೆಯನ್ನು ಹಿಡಿಯುವದಕ್ಕೂ ನಾನು ನನ್ನ ಹೃದಯ ದಲ್ಲಿ ವಿಚಾರ ಮಾಡಿಕೊಂಡೆನು.

4ನಾನು ಮಹ ತ್ತಾದ ಕಾರ್ಯಗಳನ್ನು ನಡಿಸಿದೆನು, ಮನೆಗಳನ್ನು ಕಟ್ಟಿಸಿ ಕೊಂಡೆನು; ದ್ರಾಕ್ಷಾತೋಟಗಳನ್ನು ನೆಟ್ಟೆನು.

5ಉದ್ಯಾನ ವನಗಳನ್ನೂ ಹಣ್ಣು ತೋಟಗಳನ್ನೂ ಮಾಡಿಕೊಂಡು ಅವುಗಳಲ್ಲಿ ತರತರವಾದ ಹಣ್ಣಿನ ವೃಕ್ಷಗಳನ್ನು ನೆಟ್ಟೆನು.

ಪ್ರಸಂಗಿ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी