೧ ಸಮುವೇಲನು 25:32

ಆಗ ದಾವೀದನು ಅಬೀಗೈಲಳಿಗೆ--ನನ್ನನ್ನು ಎದುರು ಗೊಳ್ಳುವದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾ ಯೇಲಿನ ದೇವರಾದ ಕರ್ತನಿಗೆ ಸ್ತೋತ್ರವಾಗಲಿ.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 25

30ಇದಲ್ಲದೆ ನನ್ನ ಒಡೆಯನಾದ ನಿನ್ನನ್ನು ಕುರಿತು ಕರ್ತನು ಹೇಳಿದ ಒಳ್ಳೇದನ್ನೆಲ್ಲಾ ನಿನಗೆ ಮಾಡಿ ನಿನ್ನನ್ನು ಇಸ್ರಾಯೇಲ್ಯರ ಮೇಲೆ ನಾಯಕನಾಗಿ ನೇಮಿಸಿದಾಗ ಏನಾಗುವ ದಂದರೆ, ನೀನು ಸುಮ್ಮನೆ ರಕ್ತ ಚೆಲ್ಲಿದ್ದೂ ನನ್ನ ಒಡೆಯನು ತನಗೆ ತಾನೇ ಮುಯ್ಯಿ ತೀರಿಸಿಕೊಂಡದ್ದೂ ನಿನಗೆ ವ್ಯಥೆಯಾಗಿರುವದಿಲ್ಲ;

31ನನ್ನ ಒಡೆಯನ ಹೃದಯಕ್ಕೆ ಅಪರಾಧವಾಗಿರುವದಿಲ್ಲ. ಆದರೆ ನನ್ನ ಒಡೆಯನಿಗೆ ಕರ್ತನು ಚೆನ್ನಾಗಿ ನಡೆಸಿದಾಗ ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು ಅಂದಳು.

32ಆಗ ದಾವೀದನು ಅಬೀಗೈಲಳಿಗೆ--ನನ್ನನ್ನು ಎದುರು ಗೊಳ್ಳುವದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾ ಯೇಲಿನ ದೇವರಾದ ಕರ್ತನಿಗೆ ಸ್ತೋತ್ರವಾಗಲಿ.

33ನಿನ್ನ ಬುದ್ಧಿಮಾತು ಆಶೀರ್ವದಿಸಲ್ಪಡಲಿ. ನಾನು ರಕ್ತ ಚೆಲ್ಲುವದನ್ನೂ ನನ್ನ ಕೈಯಿಂದ ನಾನೇ ಮುಯ್ಯಿ ತೀರಿಸದಂತೆಯೂ ಈ ಹೊತ್ತು ನನ್ನನ್ನು ಆಟಂಕಪಡಿ ಸಿದ ನಿನಗೆ ಆಶೀರ್ವಾದವಾಗಲಿ.

34ನಿನಗೆ ಕೇಡು ಮಾಡದ ಹಾಗೆ ನನಗೆ ಆಟಂಕ ಮಾಡಿದ ಇಸ್ರಾ ಯೇಲಿನ ದೇವರಾದ ಕರ್ತನ ಜೀವದಾಣೆ, ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದೆ ಹೋಗಿದ್ದರೆ ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ ಅಂದನು.

೧ ಸಮುವೇಲನು 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी