ನಿನ್ನ ನೆರೆಯವನ ಮೇಲೆ ಸುಳ್ಳುಸಾಕ್ಷಿ ಹೇಳಬೇಡ.
18ವ್ಯಭಿಚಾರ ಮಾಡಬೇಡ.
19ಕದಿಯಬೇಡ.
20ನಿನ್ನ ನೆರೆಯವನ ಮೇಲೆ ಸುಳ್ಳುಸಾಕ್ಷಿ ಹೇಳಬೇಡ.
21ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ; ನೆರೆಯವನ ಮನೆಯನ್ನೂ ಅವನ ಹೊಲವನ್ನೂ ದಾಸ ದಾಸಿಯರನ್ನೂ ಪಶು ಕತ್ತೆಗಳನ್ನೂ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬೇಡ ಎಂದು ಹೇಳಿದನು.
22ಈ ಮಾತುಗಳನ್ನು ಕರ್ತನು ಬೆಂಕಿಯ ಮೇಘದ ಕಾರ್ಗತ್ತಲೆಯ ಮಧ್ಯದಿಂದಲೂ ಮಹಾಶಬ್ದ ದಿಂದಲೂ ಬೆಟ್ಟದಲ್ಲಿ ನಿಮ್ಮ ಸಭೆಗೆಲ್ಲಾ ಹೇಳಿದನು; ಹೆಚ್ಚೇನೂ ಕೂಡಿಸಲಿಲ್ಲ. ಇವುಗಳನ್ನು ಆತನು ಕಲ್ಲಿನ ಎರಡು ಹಲಗೆಗಳಲ್ಲಿ ಬರೆದು ನನಗೆ ಕೊಟ್ಟನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ