ಹೋಶೇ 11:9

ನನ್ನ ಕೋಪದ ಉರಿಯನ್ನು ನಾನು ತೀರಿಸುವದಿಲ್ಲ, ನಾನು ಎಫ್ರಾಯಾಮನ್ನು ನಾಶ ಮಾಡಲು ತಿರುಗಿಕೊಳ್ಳುವದಿಲ್ಲ; ನಾನು ದೇವರೇ ಮನುಷ್ಯನಲ್ಲ, ನಿಮ್ಮ ಮಧ್ಯದಲ್ಲಿರುವಾತನಾದ ಪರಿ ಶುದ್ಧನೇ. ಪಟ್ಟಣದೊಳಗೆ ನಾನು ಪ್ರವೇಶಿಸುವದಿಲ್ಲ.

ಸಂದರ್ಭದೊಂದಿಗೆ ಓದಿ · ಹೋಶೇ 11

7ನನ್ನ ಜನರು ನನ್ನ ಕಡೆಯಿಂದ ಹಿಂಜರಿಯಬೇಕೆಂದು ತೀರ್ಮಾನಿಸಿದ್ದಾರೆ; ಅವರನ್ನು ಮಹೋನ್ನತನ ಬಳಿಗೆ ಕರೆದರೂ ಒಬ್ಬನಾದರೂ ಆತನನ್ನು ಉನ್ನತ ಪಡಿಸಲಾರನು.

8ಎಫ್ರಾಯಾಮೇ, ನಾನು ನಿನ್ನನ್ನು ಬಿಟ್ಟು ಬಿಡುವದು ಹೇಗೆ? ಇಸ್ರಾಯೇಲೇ, ನಿನ್ನನ್ನು ನಾನು ಬಿಡಿಸುವದು ಹೇಗೆ? ನಾನು ನಿನ್ನನ್ನು ಅದ್ಮದ ಹಾಗೆ ಮಾಡುವದು ಹೇಗೆ? ನಾನು ನಿನ್ನನ್ನು ಜೆಬೋಯಾಮಿನ ಹಾಗೆ ಸ್ಥಾಪಿಸುವದು ಹೇಗೆ? ನನ್ನ ಹೃದಯವು ನನ್ನಲ್ಲಿ ತಿರುಗಿಕೊಂಡಿದೆ. ನನ್ನ ಪಶ್ಚಾತ್ತಾಪಗಳು ಒಟ್ಟಿಗೆ ಹತ್ತಿ ಕೊಂಡಿವೆ.

9ನನ್ನ ಕೋಪದ ಉರಿಯನ್ನು ನಾನು ತೀರಿಸುವದಿಲ್ಲ, ನಾನು ಎಫ್ರಾಯಾಮನ್ನು ನಾಶ ಮಾಡಲು ತಿರುಗಿಕೊಳ್ಳುವದಿಲ್ಲ; ನಾನು ದೇವರೇ ಮನುಷ್ಯನಲ್ಲ, ನಿಮ್ಮ ಮಧ್ಯದಲ್ಲಿರುವಾತನಾದ ಪರಿ ಶುದ್ಧನೇ. ಪಟ್ಟಣದೊಳಗೆ ನಾನು ಪ್ರವೇಶಿಸುವದಿಲ್ಲ.

10ಅವರು ಕರ್ತನ ಹಿಂದೆ ಹೋಗುವರು; ಆತನು ಸಿಂಹದ ಹಾಗೆ ಗರ್ಜಿಸುವನು; ಆತನು ಗರ್ಜಿಸುವಾಗ ಮಕ್ಕಳು ಪಶ್ಚಿಮದಿಂದ ನಡುಗಿಬರುವರು;

11ಐಗುಪ್ತದ ಪಕ್ಷಿಯ ಹಾಗೆ ಮತ್ತು ಅಶ್ಯೂರ್ಯರ ದೇಶದ ಪಾರಿವಾಳದ ಹಾಗೆ ಅವರು ನಡುಗುವರು. ನಾನು ಅವರನ್ನು ಅವರ ಮನೆತನಗಳಲ್ಲಿ ಇಡುವೆನು ಎಂದು ಕರ್ತನು ಹೇಳುತ್ತಾನೆ.

ಹೋಶೇ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी