ಆಗ ಇಸ್ರಾಯೇಲಿನ ಮಕ್ಕಳು ಉದಯದಲ್ಲಿ ಎದ್ದು ಗಿಬೆಯಕ್ಕೆ ಎದುರಾಗಿ ದಂಡಿಳಿದರು.
17ಬೆನ್ಯಾ ವಿಾನನವರ ಹೊರತು ಇಸ್ರಾಯೇಲ್ಯರಲ್ಲಿ ಕತ್ತಿ ಹಿಡಿ ಯುವ ಮನುಷ್ಯರು ನಾಲ್ಕು ಲಕ್ಷ ಜನರೆಂದು ಎಣಿಸ ಲ್ಪಟ್ಟರು. ಇವರೆಲ್ಲರೂ ಯುದ್ಧದ ಮನುಷ್ಯರಾಗಿದ್ದರು.
18ಆಗ ಇಸ್ರಾಯೇಲಿನ ಮಕ್ಕಳು ಎದ್ದು ದೇವರ ಮನೆಗೆ ಹೋಗಿ ತಮ್ಮಲ್ಲಿ ಮೊದಲು ಬೆನ್ಯಾವಿಾನನ ಮಕ್ಕಳ ಸಂಗಡ ಯುದ್ಧಮಾಡುವದಕ್ಕೆ ಹೋಗ ಬೇಕಾ ದವರು ಯಾರೆಂದು ದೇವರನ್ನು ಕೇಳಿದರು. ಅದಕ್ಕೆ ಕರ್ತನು -- ಯೊಹೂದ ಕುಲದವರು ಮೊದಲು ಹೋಗಬೇಕು ಅಂದನು.
19ಆಗ ಇಸ್ರಾಯೇಲಿನ ಮಕ್ಕಳು ಉದಯದಲ್ಲಿ ಎದ್ದು ಗಿಬೆಯಕ್ಕೆ ಎದುರಾಗಿ ದಂಡಿಳಿದರು.
20ಇಸ್ರಾಯೇಲಿನ ಮನುಷ್ಯರು ಬೆನ್ಯಾ ವಿಾನನ ಸಂಗಡ ಯುದ್ಧಮಾಡುವದಕ್ಕೆ ಹೊರಟರು; ಇಸ್ರಾಯೇಲಿನ ಮನುಷ್ಯರು ಗಿಬೆಯ ಬಳಿಯಲ್ಲಿ ಯುದ್ಧಕ್ಕೆ ವ್ಯೂಹಕಟ್ಟಿದರು.
21ಆಗ ಬೆನ್ಯಾವಿಾನನ ಮಕ್ಕಳು ಗಿಬೆಯದಿಂದ ಹೊರಟು ಇಸ್ರಾಯೇಲ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಆ ದಿನದಲ್ಲಿ ನೆಲಕ್ಕೆ ಬೀಳುವಂತೆ ಸಂಹರಿಸಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ