ಯೆರೆಮಿಯ 6:13

ಅವ ರಲ್ಲಿ ಚಿಕ್ಕವನು ಮೊದಲುಗೊಂಡು ದೊಡ್ಡವರ ವರೆಗೆ ಅವರೆಲ್ಲರೂ ತಮ್ಮನ್ನು ಲೋಭಕ್ಕೆ ಒಪ್ಪಿಸಿ ಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕರ ವರೆಗೆ ಪ್ರತಿ ಯೊಬ್ಬನು ಸುಳ್ಳಾಗಿ ನಡಕೊಳ್ಳುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 6

11ಆದದರಿಂದ ಕರ್ತನ ಕೋಪದಿಂದ ನಾನು ತುಂಬಿ ದ್ದೇನೆ, ಅದನ್ನು ನನ್ನೊಳಗೆ ಬಿಗಿಹಿಡಿದು ನನಗೆ ಸಾಕಾಯಿತು; ಅದನ್ನು ದೂರ ಇರುವ ಮಕ್ಕಳ ಮೇಲೆ ಮತ್ತು ಯೌವನಸ್ಥರ ಕೂಟ ಸಹಿತವಾಗಿ ಅವರ ಮೇಲೆ ಸುರಿಸುವೆನು. ನಿಶ್ಚಯವಾಗಿ ಗಂಡನು ಹೆಂಡತಿಯ ಸಂಗಡಲೂ ಮುದುಕನು ದಿನ ತುಂಬಿದವನ ಸಂಗ ಡಲೂ ಹಿಡಿಯಲ್ಪಡುವರು.

12ಅವರ ಮನೆಗಳೂ ಹೊಲಗಳೂ ಹೆಂಡತಿಯರೂ ಸಹಿತವಾಗಿ ಬೇರೊಬ್ಬ ರಿಗೆ ಆಗುವವು; ದೇಶದ ನಿವಾಸಿಗಳ ಮೇಲೆ ನನ್ನ ಕೈ ಚಾಚುವೆನು ಎಂದು ಕರ್ತನು ಅನ್ನುತ್ತಾನೆ.

13ಅವ ರಲ್ಲಿ ಚಿಕ್ಕವನು ಮೊದಲುಗೊಂಡು ದೊಡ್ಡವರ ವರೆಗೆ ಅವರೆಲ್ಲರೂ ತಮ್ಮನ್ನು ಲೋಭಕ್ಕೆ ಒಪ್ಪಿಸಿ ಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕರ ವರೆಗೆ ಪ್ರತಿ ಯೊಬ್ಬನು ಸುಳ್ಳಾಗಿ ನಡಕೊಳ್ಳುತ್ತಾನೆ.

14ಸಮಾಧಾನ ವಿಲ್ಲದಿರುವಾಗ--ಸಮಾಧಾನ ಎಂದು ಹೇಳಿ ನನ್ನ ಜನರ ಕುಮಾರ್ತೆಯ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ.

15ಅಸಹ್ಯವನ್ನು ಮಾಡಿದ ಮೇಲೆ ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆಪಡ ಲಿಲ್ಲ; ಇಲ್ಲವೆ ಲಜ್ಜೆಯನ್ನು ಅರಿಯರು; ಆದದರಿಂದ ಅವರು ಬೀಳುವವರೊಳಗೆ ಬೀಳುವರು; ನಾನು ಅವ ರನ್ನು ವಿಚಾರಿಸುವ ಕಾಲದಲ್ಲಿ ಅವರು ಕೆಳಗೆ ಹಾಕ ಲ್ಪಡುವರು ಎಂದು ಕರ್ತನು ಹೇಳುತ್ತಾನೆ.

ಯೆರೆಮಿಯ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी