೨ ಪೂರ್ವಕಾಲವೃತ್ತಾಂತ 23:13

ಇಗೋ, ಪ್ರವೇಶದ್ವಾರದ ತನ್ನ ಸ್ತಂಭದ ಬಳಿ ಯಲ್ಲಿ ಅರಸನು ನಿಂತಿದ್ದನು. ಪ್ರಧಾನರೂ ತುತೂರಿ ಹಿಡಿಯುವವರೂ ಅರಸನ ಬಳಿಯಲ್ಲಿ ಇದ್ದರು. ಇದಲ್ಲದೆ ದೇಶದ ಜನರೆಲ್ಲರು ಸಂತೋಷಪಟ್ಟು ತುತೂರಿಗಳನ್ನು ಊದಿದರು. ಹಾಗೆಯೇ ಹಾಡು ಗಾರರೂ ಗೀತವಾದ್ಯಗಳನ್ನು ಹಿಡಿದು ಸ್ತುತಿಸುವದಕ್ಕೆ ಬೋಧಿಸುವವರೂ ಇದ್ದರು. ಆಗ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದು ಕೊಂಡು--ದ್ರೋಹ, ದ್ರೋಹ ಎಂದು ಕೂಗಿದಳು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 23

11ಆಗ ಅವರು ಅರಸನ ಮಗನನ್ನು ಹೊರಕ್ಕೆ ಕರತಂದು ಅವನ ತಲೆಯ ಮೇಲೆ ಕಿರೀಟ ವನ್ನಿಟ್ಟು ಸಾಕ್ಷಿಯನ್ನು ಕೊಟ್ಟು ಅವನನ್ನು ಅರಸನನ್ನಾಗಿ ಮಾಡಿದರು. ಯೆಹೋಯಾದನೂ ಅವನ ಮಕ್ಕಳೂ ಅವನನ್ನು ಅಭಿಷೇಕಿಸಿ--ದೇವರು ಅರಸನನ್ನು ರಕ್ಷಿಸಲಿ ಅಂದರು.

12ಆದರೆ ಓಡುತ್ತಾ ಅರಸನನ್ನು ಹರಸುತ್ತಿದ್ದ ಜನರ ಶಬ್ದವನ್ನು ಅತಲ್ಯಳು ಕೇಳಿದಾಗ ಅವಳು ಕರ್ತನ ಆಲಯದಲ್ಲಿ ಜನರ ಬಳಿಗೆ ಬಂದು ನೋಡಿದಳು.

13ಇಗೋ, ಪ್ರವೇಶದ್ವಾರದ ತನ್ನ ಸ್ತಂಭದ ಬಳಿ ಯಲ್ಲಿ ಅರಸನು ನಿಂತಿದ್ದನು. ಪ್ರಧಾನರೂ ತುತೂರಿ ಹಿಡಿಯುವವರೂ ಅರಸನ ಬಳಿಯಲ್ಲಿ ಇದ್ದರು. ಇದಲ್ಲದೆ ದೇಶದ ಜನರೆಲ್ಲರು ಸಂತೋಷಪಟ್ಟು ತುತೂರಿಗಳನ್ನು ಊದಿದರು. ಹಾಗೆಯೇ ಹಾಡು ಗಾರರೂ ಗೀತವಾದ್ಯಗಳನ್ನು ಹಿಡಿದು ಸ್ತುತಿಸುವದಕ್ಕೆ ಬೋಧಿಸುವವರೂ ಇದ್ದರು. ಆಗ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದು ಕೊಂಡು--ದ್ರೋಹ, ದ್ರೋಹ ಎಂದು ಕೂಗಿದಳು.

14ಆಗ ಯಾಜಕನಾದ ಯೆಹೋ ಯಾದನು ಸೈನ್ಯದ ಮೇಲೆ ಇರುವ ಶತಾಧಿಪತಿಗ ಳನ್ನು ಹೊರಗೆ ಕರತಂದು ಅವರಿಗೆ--ಅವಳನ್ನು ಸಾಲುಗಳ ಹೊರಗೆ ಹೊರಡಿಸಿರಿ, ಅವಳನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಂದುಹಾಕಿರಿ ಅಂದನು. ಯಾಕಂದರೆ ಕರ್ತನ ಆಲಯದಲ್ಲಿ ಅವ ಳನ್ನು ಕೊಲ್ಲಬೇಡಿರಿ ಎಂದು ಯಾಜಕನು ಹೇಳಿದನು.

15ಹಾಗೆಯೇ ಅವರು ಅವಳ ಮೇಲೆ ಕೈ ಹಾಕಿದರು. ಅವಳು ಅರಸನ ಮನೆಯ ಬಳಿಯಲ್ಲಿ ಕುದುರೆ ಬಾಗಲಿನ ಪ್ರವೇಶದಲ್ಲಿ ಬಂದಾಗ ಅಲ್ಲಿ ಅವಳನ್ನು ಕೊಂದು ಹಾಕಿದರು.

೨ ಪೂರ್ವಕಾಲವೃತ್ತಾಂತ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी