ಅಪೊಸ್ತಲರ ಕೃತ್ಯಗಳು 2:4

ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ಆತ್ಮನು ತಮಗೆ ನುಡಿಯುವ ಶಕ್ತಿಯನ್ನು ಕೊಟ್ಟ ಪ್ರಕಾರ ಅವರು ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವದಕ್ಕೆ ಪ್ರಾರಂಭಿಸಿದರು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 2

2ಆಗ ರಭಸವಾಗಿ ಬೀಸುವ ಬಲವಾದ ಗಾಳಿಯೋಪಾದಿಯಲ್ಲಿ ಒಂದು ಶಬ್ದವು ಆಕಾಶದಿಂದ ಫಕ್ಕನೆ ಬಂದು ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.

3ಇದಲ್ಲದೆ ಅಲ್ಲಿ ವಿಂಗಡಿಸಲ್ಪಟ್ಟ ನಾಲಿಗೆಗಳು ಬೆಂಕಿಯಂತೆ ಅವರಿಗೆ ಕಾಣಿಸಿಕೊಂಡು ಅವರಲ್ಲಿ ಪ್ರತಿಯೊಬ್ಬನ ಮೇಲೆ ಅದು ಕೂತುಕೊಂಡಿತು.

4ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ಆತ್ಮನು ತಮಗೆ ನುಡಿಯುವ ಶಕ್ತಿಯನ್ನು ಕೊಟ್ಟ ಪ್ರಕಾರ ಅವರು ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವದಕ್ಕೆ ಪ್ರಾರಂಭಿಸಿದರು.

5ಆಕಾಶದ ಕೆಳಗಿರುವ ಪ್ರತಿಯೊಂದು ಜನಾಂಗದವರೊಳಗಿಂದ (ಬಂದಿದ್ದ) ಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸ ಮಾಡುತ್ತಿದ್ದರು

6ಆಗ ಈ ಶಬ್ದವು ಬಹು ದೂರದವರೆಗೆ ಕೇಳಿಸಿದ್ದರಿಂದ ಜನಸಮೂಹವು ಕೂಡಿ ಬಂದು ಪ್ರತಿಯೊಬ್ಬನು ತನ್ನ ತನ್ನ ಸ್ವಭಾಷೆಯಲ್ಲಿ ಅವರು ಮಾತನಾಡಿದ್ದನ್ನು ಕೇಳಿ ಭ್ರಮೆಗೊಂಡರು.

ಅಪೊಸ್ತಲರ ಕೃತ್ಯಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी