ಅವನು ಸಮಾಧಾನ ಯಜ್ಞ ಸಮರ್ಪಣೆಯ ಕೊಬ್ಬನ್ನು ತೆಗೆದಂತೆ ಅದರ ಎಲ್ಲಾ ಕೊಬ್ಬನ್ನು ತೆಗೆಯ ಬೇಕು; ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಕರ್ತನಿಗೆ ಸುವಾಸನೆಯನ್ನಾಗಿ ಸುಡಬೇಕು; ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತಮಾಡ ಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
29ಅವನು ತನ್ನ ಕೈಯನ್ನು ಪಾಪದ ಬಲಿಯ ಮೇಲಿಟ್ಟು ಆ ಪಾಪದ ಬಲಿಯನ್ನು ದಹನಬಲಿಯ ಸ್ಥಳದಲ್ಲಿ ವಧಿಸಬೇಕು.
31ಅವನು ಸಮಾಧಾನ ಯಜ್ಞ ಸಮರ್ಪಣೆಯ ಕೊಬ್ಬನ್ನು ತೆಗೆದಂತೆ ಅದರ ಎಲ್ಲಾ ಕೊಬ್ಬನ್ನು ತೆಗೆಯ ಬೇಕು; ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಕರ್ತನಿಗೆ ಸುವಾಸನೆಯನ್ನಾಗಿ ಸುಡಬೇಕು; ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತಮಾಡ ಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
32ಅವನು ಪಾಪದ ಬಲಿಗಾಗಿ ಒಂದು ಕುರಿಮರಿ ಯನ್ನು ತರುವದಾದರೆ ದೋಷವಿಲ್ಲದ ಒಂದು ಹೆಣ್ಣನ್ನು ತರಬೇಕು;
33ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ಪಾಪದ ಬಲಿಗಾಗಿ ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ